200 ರಾಜಕೀಯ ಪಕ್ಷಗಳ ಲೆಕ್ಕಪತ್ರ ಪರಿಶೀಲನೆ: ಐಟಿ ಇಲಾಖೆಗೆ ಚುನಾವಣಾ ಆಯೋಗದ ಸೂಚನೆ

ಹೊಸದಿಲ್ಲಿ,ಡಿ.21: 2005ರಿಂದೀಚಿಗೆ ಚುನಾವಣೆಗಳಲ್ಲಿ ಸ್ಪರ್ಧಿಸದ್ದಕ್ಕಾಗಿ ಪಟ್ಟಿಯಿಂದ ತೆಗೆದು ಹಾಕಲಾಗಿರುವ 200ಕ್ಕೂ ಅಧಿಕ ರಾಜಕೀಯ ಪಕ್ಷಗಳ ಲೆಕ್ಕಪತ್ರಗಳನ್ನು ಪರಿಶೀಲಿಸುವಂತೆ ಚುನಾವಣಾ ಆಯೋಗವು ಆದಾಯ ತೆರಿಗೆ ಇಲಾಖೆಗೆ ಸೂಚಿಸಲಿದೆ.
ಈ ಪೈಕಿ ಹೆಚ್ಚಿನ ಪಕ್ಷಗಳು ದೇಣಿಗೆಗಳನ್ನು ಸ್ವೀಕರಿಸಿ ಜನರು ತಮ್ಮ ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳಲು ನೆರವಾಗಲು ದಾಖಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿವೆ ಎನ್ನುವುದು ಆಯೋಗದ ಅಭಿಪ್ರಾಯವಾಗಿದೆ.
ಪಟ್ಟಿಯಿಂದ ತೆಗೆದು ಹಾಕಲಾಗಿರುವ ಪಕ್ಷಗಳು ಕಪ್ಪುಹಣವನ್ನು ಬಿಳಿಯಾಗಿಸುವ ದಂಧೆಯಲ್ಲಿ ತೊಡಗಿಕೊಂಡಿದ್ದರೆ ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆಯೊಂದಿಗೆ ಈ ಪಕ್ಷಗಳ ಪಟ್ಟಿಯೊಂದನ್ನು ಆಯೋಗವು ಆದಾಯ ತೆರಿಗೆ ಇಲಾಖೆಗೆ ಕಳುಹಿಸಲಿದೆ. ಆಯೋಗವು ರಾಜಕೀಯ ಪಕ್ಷಗಳ ನೋಂದಣಿ ಮಾಡಿಕೊಳ್ಳುತ್ತದೆಯಾದರೂ ಯಾವುದೇ ಪಕ್ಷದ ನೋಂದಣಿಯನ್ನು ರದ್ದು ಮಾಡುವ ಅಧಿಕಾರವನ್ನು ಹೊಂದಿಲ್ಲ.
ದೇಶದಲ್ಲಿ ನೋಂದಣಿಯಾಗಿರುವ, ಆದರೆ ಮಾನ್ಯತೆಯನ್ನು ಪಡೆಯದಿರುವ 1780ಕ್ಕೂ ಅಧಿಕ ರಾಜಕೀಯ ಪಕ್ಷಗಳಿವೆ. ಅಲ್ಲದೆ ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಟಿಎಂಸಿ,ಸಿಪಿಐ,ಸಿಪಿಎಂ ಮತ್ತು ಎನ್‌ಸಿಪಿ ಈ ಏಳು ರಾಷ್ಟ್ರೀಯ ಪಕ್ಷಗಳು ಮತ್ತು 58 ಪ್ರ್ರಾದೇಶಿಕ ಪಕ್ಷಗಳಿವೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







