ಆಟಗಾರನ ಬ್ಯಾಟ್ ಅನ್ನು ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ !

ಮೆಲ್ಬೊರ್ನ್, ಡಿ.21: ಚೆಂಡಿನ ಬಣ್ಣವನ್ನು ವಿರೂಪಗೊಳಿಸುತ್ತದೆ ಎಂಬ ಗುಮಾನಿಯ ಮೇರೆಗೆ ಆಟಗಾರನ ಬ್ಯಾಟ್‌ನ್ನು ಕ್ರಿಕೆಟ್ ಆಸ್ಟ್ರೇಲಿಯಾ ನಿಷೇಧಿಸಿದ ಘಟನೆ ನಡೆದಿದೆ.
ಆ್ಯಂಡ್ರೆ ರಸೆಲ್ ಬಿಗ್ ಬ್ಯಾಶ್ ಲೀಗ್‌ನಲ್ಲಿ ಕಪ್ಪು ಮತ್ತು ಪಿಂಕ್ ಬಣ್ಣದ ಬ್ಯಾಟ್‌ನ್ನು ಬಳಸಲು ಹೋಗಿ ಸಮಸ್ಯೆ ಎದುರಿಸಿದ ಸಿಡ್ನಿ ಥಂಡರ್ ತಂಡದ ಆಟಗಾರ. ಅವರಿಗೆ ಆ ಬ್ಯಾಟ್ ಬಳಸಲು ಸಾಧ್ಯವಾಗಲಿಲ್ಲ. ಆ ಬ್ಯಾಟ್‌ನ ಬಳಕೆಗೆ ಎದುರಾಳಿ ಸಿಡ್ನಿ ಸಿಕ್ಸರ್ಸ್ ತಂಡದ ಆಟಗಾರ ಆಕ್ಷೇಪ ಎತ್ತಿದ ಕಾರಣಕ್ಕಾಗಿ ಅವರ ಬ್ಯಾಟ್ ಬ್ಯಾನ್ ಆಗಿದೆ.
ಸಿಡ್ನಿ ಥಂಡರ್ ತಂಡದ ಆಟಗಾರ ರಸೆಲ್ ಅವರು ಆಸ್ಟ್ರೇಲಿಯ ಬಿಗ್ ಬ್ಯಾಶ್ ಲೀಗ್‌ನ ಮೊದಲ ಪಂದ್ಯದಲ್ಲಿ 7ನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕ್ರೀಸ್‌ಗೆ ಆಗಮಿಸಿದಾಗ ಎದುರಾಳಿ ಸಿಡ್ನಿ ಸಿಕ್ಸರ್ಸ್ ತಂಡದ ನಾಯಕ ಬ್ರಾಡ್ ಹಡಿನ್ ಅವರು ರಸೆಲ್ ಬ್ಯಾಟ್‌ನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಅಂಪೈರ್‌ನ ಗಮನ ಸೆಳೆದರು. ರಸೆಲ್ ಕೈಯಲ್ಲಿರುವ ಬ್ಯಾಟ್ ನ ಬಳಕೆಗೆ ಕಾನೂನಿನಲ್ಲಿ ಅವಕಾಶ ಇದೆಯೋ ಎಂದು ಪ್ರಶ್ನಿಸಿದರು. ಈ ವಿಚಾರದ ಬಗ್ಗೆ ಪರಿಶೀಲನೆ ನಡೆಸಿದ ಕ್ರಿಕೆಟ್ ಆಸ್ಟ್ರೇಲಿಯ ಕಪ್ಪು ಮತ್ತು ಪಿಂಕ್ ಬಣ್ಣದ ಬ್ಯಾಟ್ ಬಳಕೆಯನ್ನು ನಿಷೇಧಿಸಿತು.
ಆರಂಭದಲ್ಲಿ ಕಪ್ಪು ಮತ್ತು ಪಿಂಕ್ ಬಣ್ಣದ ಬ್ಯಾಟ್ ಬಳಕೆಗೆ ಕ್ರಿಕೆಟ್ ಆಸ್ಟ್ರೇಲಿಯ ಅನುಮತಿ ನೀಡಿತ್ತು. ಬಿಗ್ ಬ್ಯಾಶ್ ಲೀಗ್‌ನಲ್ಲಿ ಬಣ್ಣ ಬಣ್ಣದ ಬ್ಯಾಟ್‌ನ ಬಳಕೆಗೆ ಅವಕಾಶವಿದೆ ಎಂದು ಹೇಳಿತ್ತು. ಈ ಕಾರಣದಿಂದಾಗಿ ರಸೆಲ್ ಆ ಬ್ಯಾಟ್‌ನೊಂದಿಗೆ ಆಗಮಿಸಿದ್ದರು. ಆದರೆ ಅವರಿಗೆ ಆ ಬ್ಯಾಟ್‌ನಲ್ಲಿ ಅವರಿಗೆ ಸಾಧ್ಯವಾಗಲಿಲ್ಲ.
ಸಿಡ್ನಿ ಥಂಡರ್ ತಂಡದ ಸಹ ಆಟಗಾರ ಕ್ರಿಸ್ ಗೇಲ್ ಸಿಕ್ಸರ್ಸ್ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಕಲರ್ ಮತ್ತು ಎಲೆಕ್ಟ್ರಿಕ್ ಗ್ರೀನ್ ಬಣ್ಣ ದ ಬ್ಯಾಟ್ ಬಳಕೆ ಮಾಡಿದ್ದರು.ಆದರೆ ಈ ಎರಡೂ ಬಣ್ಣದ ಬ್ಯಾಟ್‌ಗಳ ಬಳಕೆಗೆ ಅವಕಾಶ ಇರುವ ಹಿನ್ನೆಲೆಯಲ್ಲಿ ಈ ಬಗ್ಗೆ ಯಾರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.
ಆ್ಯಂಡ್ರೆ ರಸೆಲ್ ಕೈಯಲ್ಲಿದ್ದ ಬ್ಯಾಟ್‌ನ ಬಣ್ಣ ಚೆಂಡಿನ ಬಣ್ಣವನ್ನು ವಿರೂಪಗೊಳಿಸುತ್ತದೆ. ಬ್ಯಾಟ್‌ನ ಬಣ್ಣ ಕಳಪೆಯಾಗಿರುವ ಹಿನ್ನೆಲೆಯಲ್ಲಿ ಚೆಂಡಿನ ಬಣ್ಣ ಬದಲಾಗಿರುವುದು.ಚೆಂಡಿನಲ್ಲಿ ಕಪ್ಪು ಗೆರೆ ಮೂಡಿರುವುದು ಪತ್ತೆಯಾಗಿದೆ. ಈ ಕಾರಣದಿಂದಾಗಿ ಚೆಂಡಿನ ಬಣ್ಣ ಬದಲಾಯಿಸುವ ಕಪ್ಪು ಮತ್ತು ಪಿಂಕ್ ಬಣ್ಣದ ಬ್ಯಾಟ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಆ್ಯಂಟನಿ ಎವರಾರ್ಡ್ ತಿಳಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







