ಡಿ. 23 ರಂದು ಮೊಂಟೆಪದವಿನಲ್ಲಿ ತಾಜುಲ್ ಉಲಮಾ ಸುನ್ನೀ ಸೆಂಟರ್ ಉದ್ಘಾಟನೆ
ಕೊಣಾಜೆ,ಡಿ.21:ಎಸ್.ವೈ.ಎಸ್ ಮೊಂಟೆಪದವು ಬ್ರಾಂಚ್ ವತಿಯಿಂದ ತಾಜುಲ್ ಉಲಮಾ ಸುನ್ನೀ ಸೆಂಟರ್ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಮೀಲಾದೇ ಮುಸ್ತಫಾ (ಸ.ಅ)-16 ಕಾರ್ಯಕ್ರಮವು ಡಿಸೆಂಬರ್ 23 ಶುಕ್ರವಾರ ಸಂಜೆ 4:30ಕ್ಕೆ ಮೊಂಟೆಪದವಿನಲ್ಲಿ ನಡೆಯಲಿರುವುದು.
ಸಂಜೆ 4:30 ಕ್ಕೆ ನೂತನ ಕಟ್ಟಡದ ಉದ್ಘಾಟನೆಯನ್ನು ತಾಜುಲ್ ಉಲಮಾರವರ ಸುಪುತ್ರ ಅಸ್ಸಯ್ಯದ್ ಹಾಮಿದ್ ಇಂಬಿಚ್ಛಿಕೋಯ ತಂಙಳ್ ಕೊಲಾಂಡಿ ಹಾಗೂ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ಮಂಜನಾಡಿ ರವರ ಉಪಸ್ಥಿತಿಯಲ್ಲಿ ಸುನ್ನೀ ಜಂ-ಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಖಾಝಿ ಶೈಖುನಾಬೇಕಲ್ ಉಸ್ತಾದ್ ಉದ್ಘಾಟಲಿಸಿರುವರು. ಸಂಜೆ 6:00ಗಂಟೆಗೆ ನಡೆಯುವ ಮೀಲಾದೇ ಮುಸ್ತಫಾ (ಸ.ಅ)-16 ಕಾರ್ಯಕ್ರಮವನ್ನು ಖಾಝಿ ಶೈಖುನಾ ಬೇಕಲ್ ಉಸ್ತಾದ್ ಉದ್ಘಾಟಿಸಲಿರುವರು. ಅಸ್ಸಯ್ಯದ್ ಹಾಮಿದ್ ಇಂಬಿಚ್ಛಿಕೋಯ ತಂಙಳ್ ಕೊಲಾಂಡಿರವರು ಅಧ್ಯಕ್ಷತೆಯನ್ನು ವಹಿಸಲಿರುವವರು. ಅಸ್ಸಯ್ಯದ್ ಸಈದುದ್ದೀನ್ ತಂಙಳ್ ಅಲ್-ಬುಖಾರಿ ಮಲಪುರಂ ದುವಾಶೀರ್ವಚನ ನೀಡಲಿರುವರು ಎಸ್.ವೈ.ಎಸ್ ರಾಜ್ಯ ಉಪಾಧ್ಯಕ್ಷ ಬಹು ಅಶ್ರಫ್ ಸಅದಿ ಮಲ್ಲೂರು ಮುಖ್ಯಪ್ರಭಾಷಣ ಮಾಡಲಿದ್ದಾರೆ. ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್, ಎಸ್.ಇ.ಡಿ.ಸಿ ರಾಜ್ಯಾಧ್ಯಕ್ಷ ಕೆ.ಕೆ.ಎಂ ಖಾಮಿಲ್ ಸಖಾಫಿ ಸುರಿಬೈಲ್, ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಎಂ ಸ್ವಾದಿಕ್ ಮಾಸ್ಟರ್ ಮಲಬೆಟ್ಟು, ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು, ಅಬ್ದುಲ್ ಕರೀಂ ಫೈಝಿ ಮಂಜನಾಡಿ, ಮುಹಮ್ಮದ್ ಅಲಿ ಸಖಾಫಿ ಸುರಿಬೈಲು, ಎಂ.ಎಂ ಸಿದ್ದೀಕ್ ಸಖಾಫಿ ಮೂಳೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ, ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಎಸ್.ವೈ.ಎಸ್ ಮಂಜನಾಡಿ ಸೆಂಟರ್ ಕಾರ್ಯದರ್ಶಿ ಖಾಲಿದ್ ಹಾಜಿ ಭಟ್ಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.





