ಗಂಗಾಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ
ಉಡುಪಿ, ಡಿ.21: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಗಂಗಾಕಲ್ಯಾಣ ಯೋಜನೆಯಡಿ ಸರಕಾರದ ಮಾರ್ಗಸೂಚಿಯಂತೆ 8:1:1 ಅನುಪಾತದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದು ಒಂದೇ ಕಡೆ ಕನಿಷ್ಟ 1 ಎಕ್ರೆ ಗರಿಷ್ಟ 5 ಎಕ್ರೆ ಜಮೀನಿರುವ ರೈತರಿಗೆ ನೀರಾವರಿ ಸೌಲ್ಯಕ್ಕಾಗಿ ಕೊಳವೆಬಾವಿ ಕೊರೆಸುವಿಕೆ ಅಥವಾ ತೆರೆದ ಬಾವಿ ತೆಗೆದು ಪಂಪ್‌ಸೆಟ್ ಹಾಗೂ ಪೈಪ್‌ಲೈನ್ ಅಳವಡಿಸಲಾಗುವುದು. ಗಂಗಾಕಲ್ಯಾಣ ಯೋಜನೆಯು ಸಂಪೂರ್ಣ ಸಹಾಯಧನವಾಗಿದ್ದು ನಿಗದಿತ ನಮೂನೆಯ ಅರ್ಜಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ರೂ. 81,000-ಗ್ರಾಮಾಂತರ), ಆರ್‌ಟಿಸಿ, ಸಣ್ಣ ರೈತರ ಪ್ರಮಾಣಪತ್ರ, ಇ.ಸಿ, ಸಂತತಿ ನಕ್ಷೆ, ನೀರಾವರಿ ಸೌಲ್ಯ ಇಲ್ಲವೆಂದು ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕರಣ ಇತ್ಯಾದಿ ದಾಖಲಾತಿಗಳನ್ನು ಸಲ್ಲಿಸಬೇಕು.
ಗೃಹ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಸಹಾಯಧನ ಯೋಜನೆ: 2007ರ ಎ1ರಿಂದ ಮತೀಯ ಕ್ರಿಶ್ಚಿಯನ್ ಸಮುದಾಯದ ಜನರು ಮನೆ ನಿರ್ಮಾಣ ಮಾಡಲು ಪಡೆಯುವ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಇತರೇ ಅಂಗೀಕೃತ ಹಣಕಾಸು ಸಂಸ್ಥೆಗಳಿಂದ ಗರಿಷ್ಟ ಐದು ಲಕ್ಷ ರೂಪಾಯಿಗಳ ಮತ್ತು ಅದಕ್ಕಿಂತ ಕಡಿಮೆ ಪಡೆದ ಗೃಹ ಸಾಲಕ್ಕೆ ಗರಿಷ್ಟ 1 ಲಕ್ಷ ರೂ.ಗಳಿಗೆ ಮೀರದಂತೆ ಈ ಯೋಜನೆಯಡಿಯಲ್ಲಿ ಪಲಾನುಭವಿಗಳಿಗೆ ಬಡ್ಡಿಯಲ್ಲಿ ರಿಯಾಯತಿ ನೀಡಲು ಉದ್ದೇಶಿಸಲಾಗಿದೆ.
ಆಸಕ್ತರು ನಿಗದಿತ ಅರ್ಜಿ ಹಾಗೂ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕರ ಕಛೇರಿ ಎ ಬ್ಲಾಕ್ 1ನೇ ಮಹಡಿ, ಕೊಠಡಿ ಸಂಖ್ಯೆ ಎ207, ರಜತಾದ್ರಿ ಜಿಲ್ಲಾಧಿಕಾರಿಗಳ ಸಂಕೀರ್ಣ, ಮಣಿಪಾಲ, ಉಡುಪಿ ಜಿಲ್ಲೆ ಇಲ್ಲಿಂದ ಅರ್ಜಿ ಪಡೆದು ಜ.10ರೊಳಗೆ ಕಚೇರಿಗೆ ಹಿಂದಿರುಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ ದೂರವಾಣಿ ಸಂಖ್ಯೆ 0820-2574990ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







