‘ರಾಷ್ಟ್ರ ರಕ್ಷಾ ನಿಧಿ’ಗೆ ದೇಣಿಗೆ ಸಂಗ್ರಹ
ಉಡುಪಿ, ಡಿ.21: ಇದೇ ಡಿ.25ರಂದು ಹೆಜಮಾಡಿಯಲ್ಲಿ ನಡೆಯಲಿರುವ ವಿಶ್ವ ಜಿಎಸ್‌ಬಿ ಸಮ್ಮೇಳನದ ಪ್ರಯುಕ್ತ ಗಾಯಾಳು ಸೈನಿಕರ ಕಲ್ಯಾಣ ನಿಧಿಗೆ ದೇಣಿಗೆ ಸಂಗ್ರಹಿಸಿ ಸಮರ್ಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಹೀಗೆ ಸಂಗ್ರಹವಾದ ಮೊತ್ತವನ್ನು ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್‌ಗೆ ಹಸ್ತಾಂತರಿಸಲಾಗುವುದು.
ಈ ನಿಧಿಗೆ ದೇಣಿಗೆ ನೀಡಬಯಸುವವರು ಸಮೀಪದ ಬ್ಯಾಂಕುಗಳಿಗೆ ಹೋಗಿ ‘ARMY WELFARE FUND - BATTLE CASUALTY' Payable at NewDelhi -ಈ ಹೆಸರಿಗೆ ಡಿಡಿ ಮಾಡಿಸಬೇಕು. ಡಿಡಿಯ ಮೊತ್ತ ಕನಿಷ್ಟ ರೂ. 365 ಅಥವಾ ನಿಮ್ಮ ಇಚ್ಚೆಯ ದೊಡ್ಡ ಮೊತ್ತವನ್ನು ಡಿಡಿ ಮೂಲಕ ನೀಡಬಹುದು.
ಈ ಡಿಡಿಗಳನ್ನು ಡಿ.25ರಂದು ಹೆಜಮಾಡಿಯ ಬಸ್ತಿಪಡ್ಪು ಮೈದಾನದಲ್ಲಿ ನಡೆಯಲಿರುವ ವಿಶ್ವ ಜಿಎಸ್‌ಬಿ ಸಮ್ಮೇಳನದಂದು ‘ರಾಷ್ಟ್ರ ರಕ್ಷಾ ನಿಧಿ’ಗಾಗಿ ವಿಶೇಷವಾಗಿ ನಿರ್ಮಿಸಲಾಗುವ ಕೌಂಟರ್‌ಗೆ ಬಂದು ಹಸ್ತಾಂತರಿಸಬಹುದು. ಅಥವಾ ಜಿಎಸ್‌ಬಿ ಹಿತರಕ್ಷಣಾ ವೇದಿಕೆಯ ಪ್ರತಿನಿಧಿಗಳಿಗೆ ಡಿಡಿಗಳನ್ನು ಹಸ್ತಾಂತರಿಸಬಹುದು. ನಿಮ್ಮ ವಿಳಾಸ, ಮೊಬೈಲ್ ಸಂಖ್ಯೆಗಳನ್ನು ಅವರಿಗೆ ನೀಡಬೇಕು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







