ಮಕ್ಕಳ ಬಾಲ್ಯ ಹಿತಕಾರಿಯಾಗಿರಬೇಕು: ರವಿಶಂಕರ್ ರಾವ್
ಉದ್ಯಾವರ, ಡಿ.20: ವಿದ್ಯಾರ್ಥಿಗಳ ಬಾಲ್ಯ ಕಾಲ ಹಿತಕಾರಿಯಾಗಿರುವುದು ಅತ್ಯಗತ್ಯ. ಅವರು ಸದಾ ಚಟುವಟಿಕೆಗಳಲ್ಲಿ ಕೂಡಿರುವಂತೆ ಶಿಕ್ಷಕರು ಮತ್ತು ಹೆತ್ತವರು ನೋಡಿಕೊಳ್ಳಬೇಕು ಎಂದು ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರವಿಶಂಕರ್ ರಾವ್ ಹೇಳಿದ್ದಾರೆ.
ಉದ್ಯಾವರ ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ದಿನ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಗಿರೀಶ್‌ಕುಮಾರ್, ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಸದಸ್ಯರಾದ ದಿವಾಕರ್ ಬೊಳ್ಜೆ, ಸರೋಜ, ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ಅಧ್ಯಕ್ಷ ಯು. ಆರ್. ಚಂದ್ರಶೇಖರ್ ಭಾಗವಹಿಸಿದ್ದರು.
ಎಸ್‌ಡಿಎಂಸಿ ಸದಸ್ಯರಾದ ಪ್ರತಾಪ್ ಕುಮಾರ್, ಶೇಖರ್ ಕೋಟ್ಯಾನ್, ಕಿರಣ್ ಕುಮಾರ್ ಉದ್ಯಾವರ, ಪಿಟಿಎ ಅಧ್ಯಕ್ಷ ರಮೇಶ್ ಆಚಾರ್ಯ, ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್.ಕುಬೇರಪ್ಪ, ಪ್ರಾಂಶುಪಾಲ ಮಹೇಂದ್ರ ಎಂ. ಶರ್ಮ ಉಪಸ್ಥಿತರಿದ್ದರು. ಪ್ರೌಡಶಾಲಾ ಮುಖ್ಯ ಶಿಕ್ಷಕಿ ಮೂಕಾಂಬೆ ಸ್ವಾಗತಿಸಿ, ಉಪಸ್ಯಾಸಕಿ ಪದ್ಮಶ್ರೀ ವಂದಿಸಿದರು. ಶಿಕ್ಷಕಿ ಪಂಚಾಕ್ಷರಿ ಎ.ವಿ. ಕಾರ್ಯಕ್ರಮ ನಿರೂಪಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







