ಸಿದ್ದರಾಮಯ್ಯ ಬ್ಯಾಲೆನ್ಸ್ ತಪ್ಪಿದೆ: ಶೋಭಾ ಕರಂದ್ಲಾಜೆ

ಉಡುಪಿ, ಡಿ.21: ಯಡಿಯೂರಪ್ಪ ಹೇಳಿಕೆಯಿಂದ ಸಿದ್ದರಾಮಯ್ಯ ಬ್ಯಾಲೆನ್ಸ್ ಕಳೆದುಕೊಂಡು ತನ್ನ ಎಲ್ಲಾ ಸರಕಾರಿ ಕಾರ್ಯಕ್ರಮಗಳನ್ನು ಬಿಟ್ಟು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ರಾಜ್ಯದ ಮಂತ್ರಿಗಳ ಭ್ರಷ್ಟಾಚಾರದ ಅರಿವು ಇರುವುದರಿಂದಲೇ ಸಿದ್ಧರಾಮಯ್ಯ ಬೆಂಗಳೂರಿನಲ್ಲೇ ಅಧಿಕಾರಿಗಳು, ಎಸಿಬಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರ ಜೊತೆ ಮಾತನಾಡಿದ ಅವರು, ಭ್ರಷ್ಟ ಅಧಿಕಾರಿ ಜಯಚಂದ್ರ ತನಿಖೆಯಿಂದ ಹಲವು ಸಚಿವರ ಹೆಸರು ಬಹಿರಂಗ ವಾಗಿದೆ. ಇದರಿಂದ ಆರೋಪಿ ಸಚಿವರಿಗೆ ನಡುಕ ಆರಂಭವಾಗಿದೆ ಎಂದು ತಿಳಿಸಿದರು.
ನಾನು ಮಾತನಾಡಿದರೆ ಭೂ ಕಂಪನವಾಗುತ್ತದೆಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕರಂದ್ಲಾಜೆ, ಸಿದ್ದರಾಮಯ್ಯ ಸರಕಾರವು ಹೈಕ ಮಾಂಡ್‌ಗೆ ಹಣ ಪೇಮೆಂಟ್ ಮಾಡುತ್ತಿದೆ. ಯಾರಿಗೆಲ್ಲ ಹಣ ಕೊಡಲಾ ಗಿದೆ ಎಂಬುದು ಸಿದ್ದರಾಮಯ್ಯಗೆ ತಿಳಿದಿದೆ. ಹಾಗಾಗಿ ಬಾಂಬ್ ರಾಹುಲ್ ಗಾಂಧಿ ಮನೆಯಲ್ಲೇಸಿಡಿಯಲಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯ ಎಲ್ಲಾ ನಾಯಕರೂ ಜಾತಿ ಸಮಾವೇಶ ನಡೆಸುತ್ತಾರೆ, ಹಾಗಾಗಿ ನಾನು ಮಾಡಿದರೆ ಯಾಕೆ ತಪ್ಪು ಎಂಬ ಈಶ್ವರಪ್ಪಹೇಳಿಕೆಗೆ ಉತ್ತರಿಸಿ ಶೋಭಾ ಕರಂದ್ಲಾಜೆ, ಬಿಜೆಪಿ ಯಾವುದೇ ಜಾತಿಯ ಸಮಾವೇಶ ವನ್ನು ಮಾಡಿಲ್ಲ. ಹಿಂದುಳಿದ ವರ್ಗದ ಮೋರ್ಚಾದಿಂದ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಆ ಜಾತಿ ಸಮಾವೇಶಕ್ಕೆ ಕರೆದರೆ ನಾವು ಹೋಗುತ್ತೇವೆ. ಅದಕ್ಕೆ ಹೋಗೋದು ತಪ್ಪಲ್ಲ ಎಂದು ಸ್ಪಷ್ಟ ಪಡಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







