ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

ಉಡುಪಿ, ಡಿ.21: ಜಮೀಯ್ಯತುಲ್ ಫಲಾಹ್ ಉಡುಪಿ ಘಟಕ ಹಾಗೂ ಜೆಸಿಐ ಕುಂದಾಪುರದ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ‘ಗೆಲುವಿನ ಗುಟ್ಟು’ ಹಾಗೂ ‘ನೀರು ಉಳಿಸಿ’ ಕುರಿತ ತರಬೇತಿ ಕಾರ್ಯಕ್ರಮವನ್ನು ಡಿ.20ರಂದು ನಿಟ್ಟೂರು ಹನುಮಂತನಗರ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ತರಬೇತಿ ಕಾರ್ಯಕ್ರಮವನ್ನು ಜೆಸಿಐ ಅಂತಾ ರಾಷ್ಟ್ರೀಯ ತರಬೇತುದಾರ ರಾದ ಅರುಣಾ ಐತಾಳ್ ಹಾಗೂ ಕುಂದಾಪುರ ಜೆಸಿಐ ಅಧ್ಯಕ್ಷೆ ಅಕ್ಷತಾ ಗಿರೀಶ್ ನಡೆಸಿಕೊಟ್ಟರು. ಉಡುಪಿ ಘಟಕದ ಅಧ್ಯಕ್ಷ ಶಭಿ ಅಹ್ಮದ್ ಕಾಝಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮುಶರತ್, ಘಟಕದ ಮಾಜಿ ಅಧ್ಯಕ್ಷ ಕಾಸಿಂ ಬಾರ್ಕೂರು, ಕಾರ್ಯದರ್ಶಿ ಸಮೀರ್ ಎಂ. ಉಪಸ್ಥಿತ ರಿದ್ದರು. ಯು. ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





