‘ಕಲಾಶ್ರೀ’ ಸ್ಪರ್ಧಾ ವಿಜೇತರ ಪಟ್ಟಿ
ಮಂಗಳೂರು, ಡಿ.21: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ) ವತಿಯಿಂದ ಗ್ರಾಮಾಂತರ ವ್ಯಾಪ್ತಿಯ ಮಂಗಳೂರು ತಾಲೂಕು ಮಟ್ಟದ ಕಲಾಶ್ರೀ ಕಾರ್ಯಕ್ರಮವು ವಾಮಂಜೂರಿನ ಜ್ಯೋತಿ ಸಮಗ್ರ ಶಾಲೆಯಲ್ಲಿ ನಡೆಯಿತು.
ಹೇಮಲತಾ ರಘು ಸಾಲ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತ ಸಂಚಾಲಕ ಗಣೇಶ್ ಭಟ್ ಉದ್ಘಾಟಿಸಿದರು. ಸ್ಪರ್ಧಾತ್ಮಕ ಚಟುವಟಿಕೆಗಳಾದ ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ ಪ್ರದರ್ಶನ ಕಲೆ, ವಿಜ್ಞಾನ ನೂತನ ಆವಿಷ್ಕಾರಗಳಲ್ಲಿ 107 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ಪರ್ಧೆಯ ವಿಜೇತರು: ಸೃಜನಾತ್ಮಕ ಕಲೆಯಲ್ಲಿ ಕಿನ್ನಿಗೋಳಿ ಸರಕಾರಿ ಸಂಯುಕ್ತ ಪ್ರೌಢಶಾಲೆಯ 10ನೆ ತರಗತಿಯ ವಿದ್ಯಾರ್ಥಿನಿ ಸೌರಭ ಪ್ರಥಮ, ಮೂಡುಬಿದಿರೆ ಜೈನ ಪ್ರೌಢಶಾಲೆಯ ಸುದೀಪ್ ದ್ವಿತೀಯ.
ಸೃಜನಾತ್ಮಕ ಬರವಣಿಗೆಯಲ್ಲಿ ಕಟೀಲು ಶಾಲೆಯ 9ನೆ ತರಗತಿಯ ಸುಲೋಚನಾ ಪ್ರಥಮ, ಕಿನ್ನಿಕಂಬಳ ಶಾಲೆಯ 9ನೆ ತರಗತಿಯ ಭವ್ಯಾ ದ್ವಿತೀಯ. ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ ಬೆಂದೂರಿನ ಸಂತ ತೆರೆಸಾ ಶಾಲೆಯ 8ನೆ ತರಗತಿಯ ಸಂಜನಾ ಎಸ್. ಪ್ರಥಮ, ಮೂಡುಬಿದಿರೆ ಜೈನ್ ಶಾಲೆಯ 8ನೆ ತರಗತಿಯ ಅಶ್ವಿತಾ ದ್ವಿತೀಯ ಬಹುಮಾನ ಪಡೆದಿದ್ದಾರೆ.
ವಿಜ್ಞಾನ ನೂತನ ಆವಿಷ್ಕಾರಗಳಲ್ಲಿ ಉಳ್ಳಾಲದ ಬಿಎಂ ಶಾಲೆಯ 10ನೆ ತರಗತಿಯ ಲಿಖಿತ್ ಪ್ರಥಮ, ಮೂಡುಬಿದಿರೆ ಅಲ್‌ಫುರ್ಖಾನ್ ಶಾಲೆಯ 9ನೆ ತರಗತಿಯ ಶೇಖ್ ಮುಹಮ್ಮದ್ ಮಾಝ್ ದ್ವಿತೀಯ ಬಹುಮಾನ ಪಡೆದಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







