ಜಪಾನ್: ನಿರಾಶ್ರಿತ ಸಿರಿಯ ಗರ್ಭಿಣಿಯರಿಗೆ ಪ್ರವೇಶವಿಲ್ಲ

ಟೋಕಿಯೊ, ಡಿ. 21: ಯುದ್ಧಪೀಡಿತ ಸಿರಿಯದಿಂದ ಸೀಮಿತ ಸಂಖ್ಯೆಯ ನಿರಾಶ್ರಿತರನ್ನು ಸ್ವೀಕರಿಸುವುದಾಗಿ ವಾಗ್ದಾನ ಮಾಡಿದ್ದ ಜಪಾನ್, ಈಗ ಅದರಲ್ಲೂ ವಿಚಿತ್ರ ಶರತ್ತುಗಳನ್ನು ಸೇರಿಸಿ ಟೀಕೆಗಳನ್ನು ಆಹ್ವಾನಿಸುತ್ತಿದೆ.
ವಿಶೇಷವಾಗಿ, ಗರ್ಭಿಣಿಯರಿಗೆ ಪ್ರವೇಶವಿಲ್ಲ ಎಂಬ ವಿಚಿತ್ರ ಶರತ್ತನ್ನು ಅದು ಸೇರಿಸಿರುವುದು ಎಲ್ಲರ ಹುಬ್ಬೇರಿಸಿದೆ.
12.7 ಕೋಟಿ ಜನಸಂಖ್ಯೆ ಹೊಂದಿರುವ ಜಪಾನ್, 2017ರಿಂದ ಐದು ವರ್ಷಗಳ ಅವಧಿಯಲ್ಲಿ 150 ಸಿರಿಯ ವಿದ್ಯಾರ್ಥಿಗಳನ್ನು ಸ್ವೀಕರಿಸುವುದು ಎಂಬುದಾಗಿ ಪ್ರಧಾನಿ ಶಿಂಝೊ ಅಬೆ ಮೇ ತಿಂಗಳಲ್ಲಿ ಘೋಷಿಸಿದ್ದರು.
ಇತರ ದೇಶಗಳು ಸ್ವೀಕರಿಸಲು ಒಪ್ಪಿಕೊಂಡಿರುವ ನಿರಾಶ್ರಿತರ ಸಂಖ್ಯೆಗೆ ಹೋಲಿಸಿದರೆ ಇದು ಜುಜುಬಿಯಾಗಿದೆ.
ಆದರೆ, ನಿರಾಶ್ರಿತರಿಗಾಗಿ ಜಪಾನ್ ರೂಪಿಸಿರುವ ಯೋಜನೆಯು ಗರ್ಭಿಣಿ ಮಹಿಳೆಯರನ್ನು ಹೊರಗಿಡುತ್ತದೆ ಎಂಬುದಾಗಿ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಜಪಾನ್ ಘಟಕವು ಕಳವಳ ವ್ಯಕ್ತಪಡಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







