ಡಿ.22: ಮಲ್ಲೂರ್‌ನಲ್ಲಿ ಮದ್‌ಹೇ ಮುಸ್ತಫ ಕಾರ್ಯಕ್ರಮ
ಮಂಗಳೂರು, ಡಿ.21: ಮಲ್ಲೂರಿನ ಅಸಾಸ್ ಎಜುಕೇಶನಲ್ ಸೆಂಟರ್‌ನ ಅಧೀನದಲ್ಲಿ ನಡೆಯುತ್ತಿರುವ ಮೂರು ದಿನದ ಕಾರ್ಯಕ್ರಮದ ಕೊನೆಯ ದಿನವಾದ ಡಿ.22ರಂದು ಮಗ್ರಿಬ್ ನಮಾಝ್ ಬಳಿಕ ಮುದ್‌ಹೇ ಮುಸ್ತಫ ಕಾನ್ಫರೆನ್ಸ್ ನಡೆಯಲಿದೆ.
ಅಬ್ದುರ್ರವೂಫ್ ಆಕೋಡ್‌ರ ನೇತೃತ್ವದಲ್ಲಿ ಬುರ್ದಾ ಆಲಾಪಣೆ, ಮಹ್ಪೂಸ್ ಕಮಾಲ್ ತ್ರಿಶೂರ್ ನೇತೃತ್ವದಲ್ಲಿ ಕವಾಲಿ, ಮಾಸ್ಟರ್ ಶಮ್ಮಾಝ್ ಮಂಗಳೂರು, ನಸೀಫ್ ಕ್ಯಾಲಿಕೆಟ್ ಮತ್ತು ಅಸಾಸ್ ವಿದ್ಯಾರ್ಥಿ ಸವಾದ್‌ರವರಿಂದ ನಅತೇ ಶರೀಫ್ ನಡೆಯಲಿದೆ.
ಮದ್‌ಹೇ ಮುಸ್ತಫ ಪ್ರಭಾಷಣ ಹಾಗು ಕೂಟು ಪ್ರಾರ್ಥನೆಗೆ ಆಧ್ಯಾತ್ಮಿಕ ನಾಯಕ ಅಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ನೇತೃತ್ವ ನೀಡಲಿದ್ದಾರೆ. ಅಲ್‌ಹಾಜ್ ಪಿ.ಎಂ. ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಥೆಯ ಸಾರಥಿ ಮಲ್ಲೂರು ಸಅದಿ ಉದ್ಘಾಟಿಸಲಿದ್ದಾರೆ.
ಮಲ್ಲೂರು ಗ್ರಾಪಂ ಅಧ್ಯಕ್ಷ ಯೂಸುಫ್‌ರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ರಾಜೇಶ್ ಬೀಡಿಯ ಮುಹಮ್ಮದ್ ಹಾಜಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.





