ಕೃಷಿ ಕೂಲಿಕಾರರ ರಾಜ್ಯ ಸಮ್ಮೇಳನದ ನಿರ್ಣಯ ಅಂಗೀಕಾರ
ಕುಂದಾಪುರ, ಡಿ.21: ಕೊಡಗು ಜಿಲ್ಲೆ ದಿಡ್ಡಳ್ಳಿ ಆದಿವಾಸಿ ಜನರಿಗೆ ಹಕ್ಕು ಪತ್ರ ನೀಡಬೇಕು ಸೇರಿದಂತೆ ಒಟ್ಟು 12 ನಿರ್ಣಯಗಳನ್ನು ಕುಂದಾಪುರದಲ್ಲಿ ಇಂದು ನಡೆದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ 6ನೆ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಂಗೀಕರಿಸಲಾಯಿತು.
ಹಿತ್ತಲು ಸಹಿತ ನಿವೇಶನ ಮತ್ತು ಮನೆ ನೀಡಬೇಕು. ಸಾರ್ವತ್ರಿಕ ಪಡಿತರ ವ್ಯವಸ್ಥೆ ಬಲಪಡಿಸಬೇಕು. ಅರಣ್ಯಭೂಮಿ, ಸರಕಾರಿ ಭೂಮಿ ಸಾಗುವಳಿ ದಾರರಿಗೆ ಹಕ್ಕುಪತ್ರ ನೀಡಬೇಕು. ದಲಿತರ ಮೇಲಿನ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ತಡೆಯಬೇಕು. ಕೃಷಿ ಕೂಲಿ ಕಾರರಿಗೆ ಕೇರಳ ಮಾದರಿ ಕಲ್ಯಾಣ ಮಂಡಳಿ ರಚಿಸಬೇಕು.
ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೊಳಿಸಬೇಕು. ಕೃಷಿ ಕೂಲಿಕಾರರಿಗೆ ಉಚಿತ ವಿದ್ಯುತ್ ನೀಡಬೇಕು. ನೀರಾ ನೀತಿ ರೂಪಿಸಬೇಕು. ಮಡೆಸ್ನಾನ-ಪಂಕ್ತಿಬೇಧ ನಿಲ್ಲಿಸಬೇಕು. ಉದ್ಯೋಗಖಾತ್ರಿ ಕೆಲಸಗಾರರಿಗೆ ಕಟ್ಟಡ ಕಾರ್ಮಿಕ ಸೌಲಭ್ಯಗಳು ಒದಗಿಸಬೇಕೆಂಬ ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಲಾಯಿತು ಎಂದು ಸಂಘದ ಪ್ರಕಟಣೆ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







