ಅಂಬೇಡ್ಕರ್ ಬ್ಯಾನರ್‌ಗೆ ಹಾನಿ
ಕೋಟ, ಡಿ.21: ಅಂಬೇಡ್ಕರ್ ಭಾವಚಿತ್ರವಿರುವ ಫ್ಲೆಕ್ಸ್ ಬ್ಯಾನರ್‌ನ್ನು ಕಿಡಿ ಗೇಡಿಗಳು ಹರಿದು ಹಾಕಿ, ಭಾವಚಿತ್ರವನ್ನು ವಿರೂಪಗೊಳಿಸಿರುವ ಘಟನೆ ಡಿ.17ರಂದು ರಾತ್ರಿ ವೇಳೆ ಮೊಳಹಳ್ಳಿ ಗ್ರಾಮದ ಮಾಸ್ತಿಕಟ್ಟೆ ಎಂಬಲ್ಲಿ ನಡೆದಿದೆ.
ಡಿ.18ರಂದು ಮೊಳಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ನಡೆದ ದಲಿತ ಜಾಗೃತಿ ಸಮಾವೇಶದ ಉದ್ಘಾಟನೆಯ ಪ್ರಯುಕ್ತ ಪ್ರಚಾರಕ್ಕಾಗಿ ಅಂಬೇಡ್ಕರ್ ಭಾವ ಚಿತ್ರ ಇರುವ ಫ್ಲೆಕ್ಸ್ ಬ್ಯಾನರನ್ನು ಅಳವಡಿಸಲಾಗಿತ್ತು. ಹಿಂದಿನ ರಾತ್ರಿ ಕಿಡಿ ಗೇಡಿಗಳು ಈ ಬ್ಯಾನರನ್ನು ಹರಿದು ಹಾಕಿ ಅಂಬೇಡ್ಕರ್ ಭಾವಚಿತ್ರವನ್ನು ವಿರೂಪಗೊಳಿಸಿರುವುದಾಗಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





