ಹೊನ್ನಾವರ: ಚಿನ್ನಾಭರಣ ಕಳವು
ಹೊನ್ನಾವರ, ಡಿ.21: ಪಟ್ಟಣದ ಪ್ರಭಾತನಗರದ ಗಾಂಧಿನಗರದ ನಿವಾಸಿ ಸಾಯಿನಾಥ ಗಜಾನನ ಗಾಂವಕರ್ ಎಂಬವರ ಮನೆಯ ಮುಂಬಾಗಿಲು ಮುರಿದು 1.84 ಲಕ್ಷ ರೂ. ವೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಮುಂಭಾಗಿಲಿನ ಬೀಗ ಒಡೆದು ಮನೆಯೊಳಗೆ ಇದ್ದ ಕಪಾಟನ್ನು ಧ್ವಂಸಗೊಳಿಸಿದ ಕಳ್ಳರು, ಅಂದಾಜು 115 ಗ್ರಾಂ ತೂಕದ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





