ಮುಂಡಗೋಡ: ‘ವಿಜ್ಞಾನ ಹಾಗೂ ಬೌದ್ಧಧರ್ಮ’ ವಿಚಾರ ಸಂಕಿರಣ ಮುಕ್ತಾಯ

ಮುಂಡಗೋಡ, ಡಿ.21: ಇಲ್ಲಿನ ಟಿಬೆಟ್ ಕಾಲನಿಯ ಲಾಮಾ ಕ್ಯಾಂಪ್ ನಂ.2ರಲ್ಲಿನ ದ್ರೆಪುಂಗ್ ಲೊಸಲಿಂಗ್ ಬೌದ್ಧಮಠದಲ್ಲಿ ಡಿ.17ರಿಂದ ನಡೆದ ವಿಜ್ಞಾನ ಹಾಗೂ ಬೌದ್ಧಧರ್ಮ ಕುರಿತ ವಿಚಾರ ಸಂಕಿರಣ ಮಂಗಳವಾರ ಮುಕ್ತಾಯಗೊಂಡಿತು. ಮೂರು ದಿನದ ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಟಿಬೆಟಿಯನ್ ಧರ್ಮಗುರು ದಲೈಲಾಮಾ ವಹಿಸಿದ್ದರು.
ಮಂಗಳವಾರ ನಡೆದ ಮೊದಲ ಹಂತದ ವಿಚಾರ ಸಂಕಿರಣದಲ್ಲಿ ಮನಸ್ಸು ಅಂದರೇನು? ಮನಸ್ಸು, ಮಿದುಳು ಮತ್ತು ವೈಯಕ್ತಿಕ ಅನುಭವ ಹಾಗೂ ಸಂಬಂಧ ಕುರಿತು ಚರ್ಚೆ ನಡೆಯಿತು. ಮಧ್ಯಾಹ್ನ ನಡೆದ 2ನೆ ಹಂತದ ವಿಚಾರ ಸಂಕಿರಣದಲ್ಲಿ ನೈತಿಕ ಶಿಕ್ಷಣದ ಕುರಿತು ಚರ್ಚಿಸಲಾಯಿತು. ಅಮೆರಿಕದ ಎಮೊರಿ ವಿಶ್ವವಿದ್ಯಾನಿಲಯ, ದಲೈಲಾಮಾ ಟ್ರಸ್ಟ್ ಹಾಗೂ ದ್ರೆಪುಂಗ್ ಬೌದ್ಧ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಈ ವಿಚಾರ ಸಂಕಿರಣ ನಡೆಯಿತು.
Next Story





