ಮಂಗಳೂರು: ಪೊಕ್ಸೊ ಕಾಯ್ದೆಯಡಿ ಮೂವರ ಸೆರೆ

ಮಂಗಳೂರು, ಡಿ.21: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಪೊಕ್ಸೊ ಕಾಯ್ದೆಯಡಿ ಮೂವರನ್ನು ಬಂಧಿಸಿದ್ದಾರೆ.
ಕುಂಪಲ ನಿವಾಸಿ ಡಾರ್ವಿನ್ ಡಿಸೋಜ (42) ಹಾಗು ಕೃತ್ಯಕ್ಕೆ ಬೆಂಬಲಿಸಿದ ಬಾಲಕಿಯ ತಾಯಿ ಲೀನಾ ನೊರೊನ್ಹಾ ಮತ್ತು ಬಾಲಕಿಯನ್ನು ಮನೆಯಲ್ಲಿ ಕೂಡಿ ಹಾಕಿದ ಮೆಲ್ವಿನ್ ಸಹಿತ ಮೂವರನ್ನು ಬಂಧಿಸಲಾಗಿದೆ.
ತೊಕ್ಕೊಟ್ಟು ಸಮೀಪದ ಆಡಂಕುದ್ರು ಬಳಿ ಘಟನೆ ಈ ಘಟನೆ ನಡೆದಿದೆ. ಆರೋಪಿಗಳು ಮೆಲ್ವಿನ್ ಎಂಬಾತನ ಮನೆಯಲ್ಲಿ ಕೂಡಿ ಹಾಕಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





