ಮಕ್ಕಳನ್ನೆತ್ತಿಕೊಂಡು ಬಾವಿಗೆ ಹಾರಿದ ಗೃಹಿಣಿ: ಮಕ್ಕಳ ಸಾವು

ಕಾಂಞಂಗಾಡ್,ಡಿ.22: ಇಬ್ಬರು ಪುಟ್ಟ ಮಕ್ಕಳೊಂದಿಗೆ ಗೃಹಿಣಿ ಬಾವಿಗೆ ಹಾರಿದ ಘಟನೆ ಕಾಸರಗೋಡು ಮಡಿಕೈ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಗೃಹಿಣಿಯನ್ನು ಅಗ್ನಿಶಾಮಕದಳ ಹಾಗೂ ಊರರವರು ಸೇರಿ ರಕ್ಷಿಸಿದ್ದಾರೆ.
ಎಚ್ಚಿಕಾನ ಎಂಬಲ್ಲಿನ್ನ ಪೋಸ್ಟ್‌ಮೆನ್ ಪೂವತ್ತಡಿ ಸುಧಾಕರನ್ ಪತ್ನಿ ಗೀತಾ(40) ಮಕ್ಕಳೊಂದಿಗೆ ಆತ್ಮಹತ್ಯೆಗೆ ಶ್ರಮಿಸಿದ ಮಹಿಳೆ. ಮಕ್ಕಳಾದ ಲಕ್ಷ್ಮಿನಂದ(2), ಹರಿನಂದ(5) ಅವರ ಜೊತೆ ಆತ್ಮಹತ್ಯೆಗೆ ಗುರುವಾರ ಬೆಳಗ್ಗೆ 7:30ಕ್ಕೆ ಯತ್ನಿಸಿದ್ದು, ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಸುಧಾಕರನ್ ಪತ್ರಗಳ ಬಟವಾಡೆಗೆ ತೆರಳಿದ ವೇಳೆ ಗೀತಾ ಈ ಕೃತ್ಯವನ್ನೆಸಗಿದ್ದಾರೆ.ಗೀತಾಗೆ ಸಣ್ಣಪುಟ್ಟ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
Next Story





