ದುಗಲಡ್ಕ ಮಖಾಂ 13ನೆ, ಉರೂಸ್ ಗೆ ಚಾಲನೆ

ಸುಳ್ಯ, ಡಿ.22: ದುಗಲಡ್ಕ ಶೈಖುನಾ ಅಸ್ಸಯ್ಯದ್ ಫಕ್ರುದ್ದೀನ್ ತಂಙಳ್ ಅಲ್ ಬುಖಾರಿರವರ 13ನೆ ಆಂಡ್ ನೇರ್ಚೆ (ಉರೂಸ್) ಹಾಗೂ ಮಖಾಂ ಉದ್ಘಾಟನೆ ಹಾಗೂ ಜಂಇಯ್ಯತ್ತುತರ್‌ಬಿಯತ್ತಿಲ್ ಬುಖಾರಿಯಾ ಇದರ 21ನ ವಾರ್ಷಿಕ ಖುತುಬಿಯತ್ ದುಗಲಡ್ಕ ಹಾಮಿದಾಬಾದ್‌ನಲ್ಲಿ ಆರಂಭಗೊಂಡಿದೆ.
ಉರೂಸ್ ಉದ್ಘಾಟನೆಯನ್ನು ಪಾಣಕ್ಕಾಡ್ ಸಯ್ಯದ್ ಸ್ವಾದಿಖ್ ಅಲಿ ಶಿಹಾಬ್ ತಂಙಳ್ ನೆರವೇರಿಸಿದರು. ಸಮಾಜದಲ್ಲಿ ಅನಾರೋಗ್ಯಕರ ಸ್ಪರ್ದೆ ಮತ್ತು ಪೈಪೋಟಿಯಿಂದ ಅಸಮಾಧಾನ ಹೆಚ್ಚುತ್ತಿದೆ. ಅಲ್ಲಾಹುನೆಡೆಗಿನ ಭಕ್ತಿ ನಮ್ಮನ್ನು ಸ್ಪರ್ಧೆಯ ಹೊರತಾಗಿ ಸಮಾಧಾನದ ಮಾರ್ಗದಲ್ಲಿ ಮುನ್ನಡೆಸುತ್ತದೆ ಎಂದು ಅವರು ಹೇಳಿದರು.
ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಸಚಿವ ಬಿ.ರಮಾನಾಥ ರೈ ಸಮಾರಂಭವನ್ನು ಉದ್ಘಾಟಿಸಿದರು. ಸಾಮಾಜಿಕ ಸಾಮರಸ್ಯದಿಂದ ನೆಮ್ಮದಿಯ ಬಾಳು ಸಾಧ್ಯವಾಗುತ್ತದೆ. ಇದು ಎಲ್ಲರಿಗೂ ಮಾದರಿ ಆಗಬೇಕು ಎಂದು ಅವರು ಹೇಳಿದರು.
ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಕೋಝಿಕ್ಕೋಡ್ ಖಾಝಿ ಮುಹಮ್ಮದ್ ಕೋಯ ತಂಙಳ್ ಜಮಾಲುಲೈಲಿ, ಎನ್.ಪಿ.ಎಂ.ಹಾಮೀದ್ ಕೋಯಮ್ಮ ತಂಙಳ್ ಅಲ್ ಬುಖಾರಿ, ದ.ಕ. ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಯು.ಎಂ.ಉಸ್ತಾದ್, ಫಝಲ್ ಕೋಯ ತಂಙಳ್, ಸರ್ಫ್ರಾಝ್ ತಂಙಳ್, ಹಾಜಿ ಅಬ್ದುಲ್ ಸಮದ್ ಇಂಜಿನಿಯರ್ ಉಪ್ಪಳ, ಸುಳ್ಯ ನ.ಪಂ. ಮಾಜಿ ಅಧ್ಯಕ್ಷರಾದ ಎಸ್.ಶಂಸುದ್ದೀನ್, ಎಂ.ವೆಂಕಪ್ಪ ಗೌಡ, ಎನ್.ಎ.ರಾಮಚಂದ್ರ, ಜಿ.ಪಂ. ಸದಸ್ಯ ಎಂ.ಎಸ್.ಮುಹಮ್ಮದ್, ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಸಿಂಡಿಕೇಟ್ ಸದಸ್ಯ ಡಾ. ರಘು, ಪುತ್ತೂರು ರಾಮಕೃಷ್ಣ ಶಿಕ್ಷಣ ಸಂಸ್ಥೆ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಸುಳ್ಯ ನ.ಪಂ. ಸದಸ್ಯರಾದ ಶಿವಕುಮಾರ್ ಕಂದಡ್ಕ, ಕೆ.ಎಂ.ಮುಸ್ತಫಾ, ಕೆ.ಎಸ್ .ಉಮ್ಮರ್, ರಾಜ್ಯ ಕೆಪೆಕ್ ನಿರ್ದೇಶಕ ಪಿ.ಎ.ಮುಹಮ್ಮದ್, ದೇವಚಳ್ಳ ಗ್ರಾಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಅಕ್ರಮ-ಸಕ್ರಮ ಸಮಿತಿಯ ಸದಸ್ಯ ಸುಧೀರ್ ರೈ ಮೇನಾಲ, ತುಳು ಅಕಾಡಮಿಯ ಸದಸ್ಯ ಕೆ.ಟಿ.ವಿಶ್ವನಾಥ್, ಉದ್ಯಮಿ ಬಾಲಕೃಷ್ಣ ರೈ ದುಗಲಡ್ಕ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಅಬ್ದುಲ್ ರಹ್ಮಾನ್ ಮೊಗರ್ಪಣೆ, ಬಿಜೆಪಿಯ ಸೆಂಟ್ರಲ್ ಐಟಿ ಸೆಲ್‌ನ ಅಝೀಝ್ ಅಬ್ದುಲ್ಲಾ, ಅನ್ಸಾರಿಯಾ ಯತೀಂಖಾನದ ಗೌರವಾಧ್ಯಕ್ಷ ಅಬ್ಬಾಸ್ ಕಟ್ಟೆಕಾರ್, ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಅಬ್ದುಲ್ ಹಾಜಿ ಬೇರ್ಕ, ಪಿ.ಅಬ್ದುಲ್ಲಾ ಹಾಜಿ ಪಳ್ಳತ್ತೂರು, ದುಗಲಡ್ಕ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಂ.ಮೂಸ ಉಪಸ್ಥಿತರಿದ್ದರು.
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಬ್ದುಲ್ ರಹಿಮಾನ್ ಮಾಸ್ಟರ್ ಕುನ್ನುಂಗಯಿ ವಂದಿಸಿದರು.







