ಸೇಲಂ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಗೋಲ್‌ಮಾಲ್
ನಕಲಿ ಖಾತೆ ಸೃಷ್ಠಿಸಿ ಬ್ಯಾಂಕ್ ನಲ್ಲಿ 150 ಕೋಟಿ ರೂ. ಜಮೆ

ಚೆನ್ನೈ, ಡಿ.22: ಎಐಎಡಿಎಂಕೆ ನಾಯಕ ಇಳಂಗೋವನ್ ಅಧ್ಯಕ್ಷರಾಗಿರುವ ಸೇಲಂ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ನಕಲಿ ಖಾತೆ ಸೃಷ್ಠಿಸಿ 150 ಕೋಟಿ ರೂ. ಜಮೆ ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ತಮಿಳುನಾಡು ಪಿಡಬ್ಲ್ಯುಡಿ ಸಚಿವ ಎಡಪಾಡಿ ಪಳನಿಸ್ವಾಮಿಗೆ ಆಪ್ತರಾಗಿರುವ ಇಳಂಗೋವನ್ ರಾಜಕಾರಣಿಗಳಿಗೆ ಸೇರಿದ ಭಾರೀ ಮೊತ್ತದ ಕಪ್ಪು ಹಣವನ್ನು ತನ್ನ ಬ್ಯಾಂಕ್‌ನಲ್ಲಿ ಜಮೆ ಮಾಡಿರುವುದನ್ನು ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇಳಂಗೋವನ್ ಬ್ಯಾಂಕ್ ಖಾತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ಧಾರೆ.
Next Story





