ಮರುಭೂಮಿಯಲ್ಲಿ ಅಡುಗೆ ಮಾಡಿದ ದುಬೈ ದೊರೆ !
ಅಪರೂಪದ ಚಿತ್ರಗಳು
.jpg)
ದುಬೈ,ಡಿ.22: ಸಂಯುಕ್ತ ಅರಬ್ ಗಣರಾಜ್ಯ(ಯುಎಇ)ದಲ್ಲೀಗ ಗಡಗುಟ್ಟಿಸುವ ಚಳಿ. ಇದು ರಜೆಗಳಿಗೆ ಪ್ರಶಸ್ತ ಕಾಲವೂ ಹೌದು. ನಿವಾಸಿಗಳು ಮಾತ್ರವಲ್ಲ, ದೊರೆ ಮನೆತನದವರೂ ದೇಶಾದ್ಯಂತ ಆಯೋಜಿಸಲಾಗಿರುವ ಹೊಸವರ್ಷಾಚರಣೆಗೆ ಮುನ್ನ ರಜೆಯ ಮಜಾದಲ್ಲಿದ್ದಾರೆ.
ಯುಎಯ ಉಪಾಧ್ಯಕ್ಷ ಮತ್ತು ಪ್ರಧಾನಿ ಹಾಗೂ ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ತನ್ನ ಪುತ್ರ, ದುಬೈನ ಯುವರಾಜ ಶೇಖ್ ಹಮ್ದಾನ್ ಮತ್ತು ಪರಿವಾರದ ಜೊತೆಗೆ ಕೆಲವು ದಿನಗಳ ರಜಾದ ಮಜಾ ಅನುಭವಿಸಲು ದೇಶದಿಂದ ಹೊರಕ್ಕೆ ತೆರಳಿದ್ದಾರೆ.
ಹವ್ಯಾಸಿ ಛಾಯಾ ಚಿತ್ರಗ್ರಾಹಕ ಹಾಗೂ ಇನ್‌ಸ್ಟಾಗ್ರಾಂ ಬಳಕೆದಾರನಾಗಿರುವ ಹಮ್ದಾನ್ ಯುಎಇಯಿಂದ ಅಜ್ಞಾತ ತಾಣಕ್ಕೆ ತನ್ನ ಕುಟುಂಬದ ಪ್ರವಾಸದ ವಿಶೇಷ ವರದಿ ಸೇರಿದಂತೆ ಪೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರಾತಿಥ್ಯಕ್ಕೆ ಹೆಸರಾಗಿರುವ ದುಬೈ ಆಡಳಿತಗಾರ ತನ್ನ ಪರಿವಾರಕ್ಕಾಗಿ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಅಡಿಗೆ ತಯಾರಾಗುವಾಗ ನೆರವು ನೀಡುತ್ತಿರುವ ದೃಶ್ಯಗಳು ಈ ಚಿತ್ರಗಳಲ್ಲಿವೆ.....
ಕೃಪೆ : http://khaleejtimes.com/







