ಡಿ.26: ‘ಚನ್ನನ’ ಬ್ಯಾರಿ ಜಾನಪದ ಕಥಾ ಸಂಕಲನ ಬಿಡುಗಡೆ
ಮಂಗಳೂರು, ಡಿ.22: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಕಟಿಸಿದ ಪತ್ರಕರ್ತ ಹಂಝ ಮಲಾರ್ ಸಂಪಾದಿಸಿದ ‘ಚನ್ನನ’ ಜಾನಪದ ಕಥಾ ಸಂಕಲನವನ್ನು ಡಿ.26ರಂದು ಬೆಳಗ್ಗೆ 10:30ಕ್ಕೆ ಬಿಡುಗಡೆ ಕಾರ್ಯಕ್ರಮವು ನಗರದ ಅತ್ತಾವರದಲ್ಲಿರುವ ಅಕಾಡಮಿಯ ಕಚೇರಿಯಲ್ಲಿ ನಡೆಯಲಿದೆ.
ಸಚಿವ ಯು.ಟಿ. ಖಾದರ್ ಕೃತಿಯನ್ನು ಬಿಡುಗಡೆಗೊಳಿಸಲಿದ್ದು, ಅಕಾಡಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅಧ್ಯಕ್ದಷತೆ ವಹಿಸಲಿದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಬಲ್ಲಾಳ್, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅತಿಥಿಗಳಾಗಿ ಭಾಗವಸಲಿದ್ದಾರೆ. ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಸಹ-ಸಂಪಾದಕ ಅಬ್ದುರ್ರಹ್ಮಾನ್ ಕುತ್ತೆತ್ತೂರು ಪುಸ್ತಕ ಪರಿಚಯ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





