ನಾಳೆಯಿಂದ ರೇಡಿಯೋ ಜಾಕಿಗಾಗಿ ಆಯ್ಕೆ
ಮಂಗಳೂರು, ಡಿ.22: ಪಾಸ್ಟೈಮ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆಯುತ್ತಿರುವ ಕನ್ನಡದ ಅಂತಾರಾಷ್ಟ್ರೀಯ ಆನ್‌ಲೈನ್ ರೇಡಿಯೋ ‘ನಮ್ ರೇಡಿಯೋ’ದ ರೇಡಿಯೋ ಜಾಕಿಗಾಗಿ (ಆರ್.ಜೆ.) ಆಯ್ಕೆ ಮತ್ತು ತರಬೇತಿ ಕಾರ್ಯಗಾರ ಡಿ.23,24ರಂದು ನಗರದ ಬಲ್ಮಠ ಯೆನೆಪೊಯ ಕಾಲೇಜಿನಲ್ಲಿ ನಡೆಯಲಿದೆ ಎಂದು ನಮ್ ರೆಡಿಯೋದ ಕಾರ್ಯನಿರ್ವಹಣಾಧಿಕಾರಿ ಅವನಿಧರ ಹವಿಲ್ದಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎರಡು ದಿನಗಳ ಆರ್.ಜೆ. ತರಬೇತಿ ಕಾರ್ಯಕ್ರಮಕ್ಕೆ 999 ರೂಪಾಯಿ ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ. ಆಸಕ್ತರು (ದೂ.ಸಂ: 7338128901 )ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಅಧಿಕಾರಿ ರಾಜ್ ಮಲ್ಲೇಶ್ವರಂ ಉಪಸ್ಥಿತರಿದ್ದರು.
Next Story





