Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೊಂಕಣ ರೈಲ್ವೇ ವಲಯದ ಸಾಮರ್ಥ್ಯ ವೃದ್ಧಿಗೆ...

ಕೊಂಕಣ ರೈಲ್ವೇ ವಲಯದ ಸಾಮರ್ಥ್ಯ ವೃದ್ಧಿಗೆ 4500 ಕೊಟಿ ರೂ. ಯೋಜನೆ : ಸಂಜಯ್ ಗುಪ್ತಾ

ವಾರ್ತಾಭಾರತಿವಾರ್ತಾಭಾರತಿ22 Dec 2016 8:53 PM IST
share
ಕೊಂಕಣ ರೈಲ್ವೇ ವಲಯದ ಸಾಮರ್ಥ್ಯ ವೃದ್ಧಿಗೆ 4500 ಕೊಟಿ ರೂ. ಯೋಜನೆ : ಸಂಜಯ್ ಗುಪ್ತಾ

ಮಂಗಳೂರು,ಡಿ.22:ಭಾರತ ಸರಕಾರದ ಅಧೀನ ಸಂಸ್ಥೆಯಾದ ಕೊಂಕಣ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್‌ನ ವತಿಯಿಂದ ಕೊಂಕಣ ರೈಲ್ವೇ ವಲಯದ ಸಾಮರ್ಥ್ಯ ವೃದ್ಧಿಗೆ 4500 ಕೋಟಿ ರೂ ಯೋಜನೆ ಹಾಗೂ ಇತರ ಅಭಿವೃದ್ಧಿ ಯೋಜನೆಗಳನ್ನು ಗಳನ್ನು ಹಮ್ಮಿಕೊಳ್ಳಲಾಗಿದೆ .ಹೊಸದಾಗಿ 10 ನೂತನ ರೈಲು ನಿಲ್ದಾಣಗಳ ನ್ನು ಆರಂಭಿಸಲು ಶಿಲಾನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂಜಯ್ ಗುಪ್ತಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕೊಂಕಣ ರೈಲ್ವೇ ವತಿಯಿಂದ ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕ ಮಂಗಳೂರಿನ ತೋಕೂರು ವರೆಗೆ 740 ಕಿ.ಮೀ ರೈಲ್ವೇ ಹಳಿ ದ್ವಿಗುಣ ಗೊಳಿಸುವ ಯೋಜನೆ ಹೊಂದಲಾಗಿದ್ದು,ಮೊದಲ ಹಂತದಲ್ಲಿ ರೋಹಾ-ವೀರ್ ನಡುವೆ 340 ಕೋಟಿ ರೂ ಹಳಿದ್ವಿಗುಣ ಗೊಳಿಸುವ ಯೋಜನೆಯನ್ನು ಕೈ ಗೆತ್ತಿಕೊಳ್ಳಲಾಗಿದೆ ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.ಕೊಂಕಣ ರೈಲ್ವೇ ಹಳಿಯನ್ನು ಸಂಪೂರ್ಣ ವಿದ್ಯುತ್ ಚಾಲಿತ ವ್ಯವಸ್ಥೆಯನ್ನು ಹೊಂದಿರುವ ಹಳಿಯನ್ನಾಗಿ ಪರಿವರ್ತಿಸುವ 710 ಕೋಟಿ ರೂ ಯೋಜನೆಯನ್ನು ಕೈ ಗೆತ್ತಿಕೊಳ್ಳಲಾಗಿದೆ.ಈ ಸಂಬಂಧ ಟೆಂಡರ್ ಪ್ರಕ್ರೀಯೆ ಪೂರ್ಣಗೊಂಡಿದೆ .ಚಿಪ್ಲಾನ್-ಕರಾಡ್ ರೈಲ್ವೇ ಸಂಪರ್ಕ ಯೋಜನೆಗೆ 3200 ಕೋಟಿ ರೂ,ಜೈಗರ್ ದಿಗ್‌ನಿ ರೈಲ್ವೇ ಸಂಪರ್ಕ ಯೋಜನೆಗೆ 775 ಕೋಟಿ ರೂ ವೆಚ್ಚದಲ್ಲಿ ಕಾರ್ಯಗತಗೊಳಿಸಲು ಕ್ರಮ ಕೈ ಗೊಳ್ಳಲಾಗಿದೆ ಹಾಗೂ ರೈಲ್ವೇ ಸಾಮರ್ಥ್ಯ ವೃದ್ಧಿ 4,500 ಕೋಟಿ ರೂ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಈ ಯೋಜನೆಯ ಮೂಲಕ 21 ಹೊಸ ರೈಲ್ವೇ ನಿಲ್ದಾಣಗಳ ನಿರ್ಮಾಣ,147 ದ್ವಿಪಥ ರೈಲ್ವೇ ಹಳಿ ಅಳವಡಿಕೆ,18 ಹೆಚ್ಚುವರಿ ಲೂಪ್ ಲೈನ್ ಅಳವಡಿಸುವ ಯೋಜನೆ ಹೊಂದಲಾಗಿದೆ ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.

ನಗದು ರಹಿತ ಪಾವತಿ ವ್ಯವಸ್ಥೆ : ಕೊಂಕಣ ರೈಲ್ವೇ ವಿಭಾಗದ ಎಲ್ಲಾ ಪಿಆರ್‌ಎಸ್ ಕೌಂಟರ್‌ಗಳಲ್ಲಿ ನಗದು ರಹಿತ ಪಾವತಿಗೆ ವ್ಯವಸ್ಥೆ ಮಾಡಲಾಗುವುದು.ಇದುವರೆಗೆ 20ಮೆಶಿನ್‌ಗಳನ್ನು ಅಳವಡಿಸಲಾಗಿದೆ .ಉಡುಪಿಯಲ್ಲಿ ಎಟಿಎಂ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.

 ಬಯೋ ಟಾಯಿಲೆಟ್ : ಕೊಂಕಣ ರೈಲ್ವೇಯ ಕಾರವಾರ,ಮುರ್ಡೇಶ್ವರ,ಬೆಂದೂರು ಮುಕಾಂಬಿಕ ರಸ್ತೆ ಬಳಿಕ ನಿಲ್ದಾಣ,ಸುರತ್ಕಲ್ ನಿಲ್ದಾಣಗಳಲ್ಲಿ ಬಯೋ ಟಾಯಿಲೆಟ್ ವ್ಯವಸ್ಥೆಯನ್ನು ಮಾಡಲಾಗುವುದು.ಸುರತ್ಕಲ್,ಬೆಂದೂರು ಮೂಕಾಂಬಿಕ ರಸ್ತೆಬಳಿಯ ರೈಲು ನಿಲ್ದಾಣ ಉಡುಪಿ ಹಾಗೂ ಸುರತ್ಕಲ್ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈ ಗೊಳ್ಳಲಾಗಿದೆ ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.

ಎಂಆರ್‌ಪಿಎಲ್ ಪರ್ಯಾಯ ರೈಲ್ವೇ ರಸ್ತೆ: ಕೊಂಕಣ್ ರಸ್ತೆ ರೈಲ್ವೇ ಹಳಿ ಬಳಿ ಎಂಆರ್‌ಪಿಎಲ್ ಗೆ ಸಂಪರ್ಕಿಸಲು ಪರ್ಯಾಯವಾಗಿ ಬದಿಯಲ್ಲಿ ನಿರ್ಮಿಸಲಾಗುವ 82 ಕೋಟಿ ರೂ ಯೋಜನೆಯ ರೈಲ್ವೇ ರಸ್ತೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಜನವರಿ ತಿಂಗಳಲ್ಲಿ ಟೆಂಡರ್ ಪ್ರಕ್ರೀಯೆ ಪೂರ್ಣಗೊಂಡು ಮುಂದಿನ ಹದಿನೆಂಟು ತಿಂಗಳಲ್ಲಿ ಹಳಿ ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ.ತೋಕೂರು ಬಳಿ 1.75 ಕೋಟಿ ರೂ ವೆಚ್ಚದಲ್ಲಿ ಸರಕು ಸಾಗಾಟಕ್ಕೆ ಅನುಕೂಲವಾಗುವಂತೆ ಪರ್ಯಾಯ ರೈಲ್ವೇ (ಬದಿಯ )ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.

ರೈಲ್ವೇ ಸುರಕ್ಷತೆಗೆ ಸಂಬಂಧಿಸಿದಂತೆ ಒಂದು ಲಕ್ಷ ಕೋಟಿ ರೂ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.ಈ ಯೋಜನೆಯ ಪ್ರಕಾರ ಲೆವೆಲ್ ಕ್ರಾಸಿಂಗ್‌ಗಳನ್ನು ಕಡಿತಗೊಳಿಸುವುದು,ಅಪಘಾತ ರಹಿತ ವಲಯಗಳನ್ನು ವೃದ್ಧಿಸಲು ಕ್ರಮ ಕೈ ಗೊಳ್ಳಲಾಗಿದೆ.ಸ್ವಚ್ಛ ರೈಲು ಯೋಜನೆಯ ಮೂಲಕ ಶುಚಿತ್ವದ ವ್ಯವಸ್ಥೆ,ಖರ್ಚುಗಳಿಗೆ ಕಡಿತಗೊಳಿಸಲು ಕೊಂಕಣ ರೈಲ್ವೇ ಸುರಂಗ ಮಾರ್ಗಗಳಲ್ಲಿ ಎಲ್‌ಇಡಿ ವಿದ್ಯುತ್ ದೀಪಗಳನ್ನು ಹಾಗೂ ಸೊಲಾರ್ ಶಕ್ತಿಯನ್ನು ಬಳಸಲು ಯೋಜನೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಜಯ್ ಗುಪ್ತಾ ತಿಳಿಸಿದರು.

 ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಮೂಲ ಭೂತ ಸೌಕರ್ಯ ಹೆಚ್ಚಿಸಬೇಕಾಗಿದೆ.ಹಾಲಿ ಇರುವ ಕಿರಿದಾದ ಪ್ಲಾಟ್ ಪಾರ್ಮ್‌ನಿಂದಾಗಿ ಹೆಚ್ಚು ರೈಲು ನಿಲುಗಡೆಯಾಗಲು ಸಮಸ್ಯೆಯಾಗುತ್ತಿರುವುದರಿಂದ ರೈಲು ಸಂಚಾರದಲ್ಲಿ ವಿಳಂಬವಾಗುವುದು ಹೆಚ್ಚಿನ ರೈಲು ಬರಲು ಸಾಧ್ಯವಾಗದೆ ಇರುವ ಸಮಸ್ಯೆಗಳಿವೆ ಎಂದು ಸಂಜಯ್ ಗುಪ್ತಾ ತಿಳಿಸಿದ್ದಾರೆ.

ಸುದ್ದಿ ಗೊಷ್ಠಿಯಲ್ಲಿ ಕೊಂಕಣ ರೈಲ್ವೇ ನಿಗಮದ ಜನರಲ್ ಮ್ಯಾನೇಜರ್ ಜೊಸೆಫ್ ಜಾರ್ಜ್,ಚೀಫ್ ಇಂಜಿನಿಯರ್ ಗೋಪಾಲರಾಜು,ಚೀಫ್ ಕಮರ್ಶಿಯಲ್ ಮ್ಯಾನೇಜರ್ ಡಿ.ಎಸ್.ಲಿಂಗರಾಜು ಮೊದಲಾದವರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X