ಚೀನಾ-ಪಾಕ್ ಕಾರಿಡಾರ್‌ಗೆ ಸೇರ್ಪಡೆಗೊಳ್ಳಿ : ಭಾರತಕ್ಕೆ ಪಾಕ್ ಸೇನಾಧಿಕಾರಿ ಕರೆ

ಇಸ್ಲಾಮಾಬಾದ್, ಡಿ. 22: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಸೇರ್ಪಡೆಯಾಗುವಂತೆ ಪಾಕಿಸ್ತಾನದ ಉನ್ನತ ಸೇನಾಧಿಕಾರಿಯೊಬ್ಬರು ಭಾರತಕ್ಕೆ ಆಹ್ವಾನ ನೀಡಿದ್ದಾರೆ.
ಭಾರತ ಪಾಕಿಸ್ತಾನದೊಂದಿಗಿನ ‘ವೈರತ್ವವನ್ನು ತೊರೆಯಬೇಕು’ ಹಾಗೂ ಬೃಹತ್ ಯೋಜನೆಯ ಲಾಭವನ್ನು ಜಂಟಿಯಾಗಿ ಪಡೆಯಬೇಕು ಎಂದು ಕ್ವೆಟ್ಟದಲ್ಲಿ ನೆಲೆ ಹೊಂದಿರುವ ಸದರ್ನ್ ಕಮಾಂಡ್‌ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆಮಿರ್ ರಿಯಾಝ್ ಬುಧವಾರ ಹೇಳಿದರು.
ಬಲೂಚಿಸ್ತಾನ ಫ್ರಂಟಿಯರ್ ಕಾರ್ಪ್ಸ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೇಳೆ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
Next Story





