ಹನುಮಗಿರಿ ಆಂಜನೇಯ ಕ್ಷೇತ್ರಕ್ಕೆ ಸಂಸದ ನಳಿನ್ ಭೇಟಿ

ಪುತ್ತೂರು,ಡಿ.22: ತಾಲೂಕಿನ ಈಶ್ವರಮಂಗಲದ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಗುರುವಾರ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡಿತ್ತಾಯರವರು 2017ನೇ ಫೆಬ್ರವರಿ ನಡೆಯಲಿರುವ ಕೋದಂಡರಾಮ ವಿಗ್ರಹ ಪ್ರತಿಷ್ಠೆ,ಬ್ರಹ್ಮಕಲಶೋತ್ಸವದ ಬಗ್ಗೆ ಸಂಸದರಿಗೆ ಮಾಹಿತಿ ನೀಡಿದರು. ಕ್ಷೇತ್ರದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಪೂರ್ವತಯಾರಿ ಭರದಿಂದ ಸಾಗುತ್ತಿದ್ದು ವೀಕ್ಷಣೆ ನಡೆಸಿದರು.
ಬಿಜೆಪಿ ಮುಖಂಡರಾದ ಭಾಸ್ಕರ ರೈ ಕಂಟ್ರಮಜಲು,ದಿನೇಶ್ ಮುಗೇರು,ಆಡಳಿತ ಧರ್ಮದರ್ಶಿ ಶಿವರಾಮ ಪಿ,ಮೊದಲಾದವರು ಉಪಸ್ಥಿತರಿದ್ದರು.
Next Story





