ಜಲಾಶಯದಲ್ಲಿ ಮುಳುಗಿ ವ್ಯಕ್ತಿ ಸಾವು
ಮುಂಡಗೋಡ, ಡಿ.22: ಪ್ರವಾಸ ಮಾಡಲು ಬಾಚಣಿಕೆ ಜಲಾಶಯಕ್ಕೆ ಹೆಂಡತಿ ಜತೆ ಬಂದ ಹುಬ್ಬಳ್ಳಿಯ ವ್ಯಕ್ತಿಯೋರ್ವ ಜಲಾಶಯದಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಹುಬ್ಬಳ್ಳಿಯ ಮಹದೇವ ನಗರದ ನಿವಾಸಿ ಗಜಾನನ ಕೃಷ್ಣಪ್ಪ ನಾಗನೂರ(30) ಸಾವನ್ನಪ್ಪಿದ ನತದೃಷ್ಟನಾಗಿದ್ದಾನೆ.
ಬುಧವಾರ ನವದಂಪತಿ ಬಾಚಣಿಕೆ ಜಲಾಶಯಕ್ಕೆ ಬಂದಿದ್ದಾರೆ ಎನ್ನಲಾಗಿದ್ದು, ಪತಿ ನೀರಿನಲ್ಲಿ ಈಜಲು ಹೋಗಿ ಜಲಾಶಯದಲ್ಲಿ ಮುಳುಗಿದ್ದಾನೆ. ಪತ್ನಿಯೂ ಪತಿಯ ಪ್ರಾಣ ಉಳಿಸಲು ನೀರಿಗೆ ಇಳಿದಾಗ ಅಲ್ಲಿಯೆ ಇದ್ದ ವ್ಯಕ್ತಿ ಕಾಪಾಡಿದ್ದಾನೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಶವಕ್ಕಾಗಿ ತೀವ್ರ ಶೋಧ ನಡೆಸಿದರೂ ಶವ ದೊರೆಯಲಿಲ.್ಲ ಗುರುವಾರ ಶೋಧಕಾರ್ಯ ಮುಂದುವರಿಯುವುದು ಎಂದು ಹೇಳಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





