ದೇಶ ವಿದೇಶಗಳಲ್ಲಿ ಜನರು ಸಡಗರ, ಸಂಭ್ರಮದ ಕ್ರಿಸ್ಮಸ್ ಆಚರಣೆಗೆ ಸಜ್ಜಾಗಿದ್ದು, ವಿವಿಧೆಡೆ ನಕ್ಷತ್ರಗಳ ಮಿಂಚು, ಬಲೂನುಗಳ ಚಿತ್ತಾರ, ಹಚ್ಚ ಹಸಿರಾದ ಕ್ರಿಸ್ಮಸ್ ಟ್ರೀಗಳು, ಭಿನ್ನ-ವಿಭಿನ್ನವಾದ ಗೊಂಬೆಗಳು, ಸಾಂತಾ ಕ್ಲಾಸ್‌ನ ಪ್ರತಿಬಿಂಬ, ಶುಭ ಸಂಕೇತದ ಗಂಟೆ, ಘಮಘಮಿಸುವ ಬಗೆ ಬಗೆಯ ಕೇಕುಗಳ ತಯಾರಿ ಇತ್ಯಾದಿಗಳು ರಂಗು ಮೂಡಿಸಿವೆ.