ಹಾಕಿ ಏಷ್ಯಾಕಪ್: ಭಾರತದ ಅಂಡರ್-18 ತಂಡಕ್ಕೆ ಕಂಚು
ಬ್ಯಾಂಕಾಂಗ್, ಡಿ.22: ನಾಲ್ಕನೆ ಆವೃತ್ತಿಯ ಅಂಡರ್-18 ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತ ತಂಡ ಕೊರಿಯಾವನ್ನು 3-0 ಗೋಲುಗಳ ಅಂತರದಿಂದ ಮಣಿಸಿ ಕಂಚಿನ ಪದಕವನ್ನು ಜಯಿಸಿದೆ.
ಕಂಚಿನ ಪದಕಕ್ಕಾಗಿ ಗುರುವಾರ ಇಲ್ಲಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ 45ನೆ ನಿಮಿಷದಲ್ಲಿ ಗೋಲು ಬಾರಿಸಿದ ರಿತೂ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 55ನೆ ಹಾಗೂ 58ನೆ ನಿಮಿಷದಲ್ಲಿ ಅವಳಿ ಗೋಲು ಬಾರಿಸಿದ ಸಂಗೀತಾ ಕುಮಾರಿ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.
ಉಭಯ ತಂಡಗಳು ಮೊದಲಾರ್ಧದಲ್ಲಿ ಗೋಲು ಬಾರಿಸಲು ವಿಫಲವಾದವು. ಕೊರಿಯಾ ಹಲವು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದರೂ ಅದನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು.
ಏಷ್ಯಾಕಪ್‌ನಲ್ಲಿ ಕಂಚಿನ ಪದಕವನ್ನು ಜಯಿಸಿರುವ ಭಾರತದ ಜೂನಿಯರ್ ತಂಡದ ಪ್ರತಿ ಆಟಗಾರ್ತಿಯರಿಗೆ ಹಾಕಿ ಇಂಡಿಯಾ(ಎಚ್‌ಐ) ತಲಾ ಒಂದು ಲಕ್ಷ ರೂ. ಹಾಗೂ ಪ್ರತಿ ಸಪೋರ್ಟ್ ಸ್ಟಾಫ್‌ಗೆ ತಲಾ 50,000 ರೂ.ಬಹುಮಾನ ಪ್ರಕಟಿಸಿದೆ.
Next Story





