ಅಳಕೆಮಜಲು ಮಿಲಾದ್ ಕಾನ್ಫರೆನ್ಸ್, ಸೌಹಾರ್ದ ಸಮ್ಮೇಳನ

ವಿಟ್ಲ,ಡಿ.22 : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್) ಅಳಕೆಮಜಲು ಘಟಕದ ಆಶ್ರಯದಲ್ಲಿ ಜನಾಬ್ ಅಬ್ದುರ್ರಹ್ಮಾನ್ (ಪುತ್ತು ಹಾಜಿ) ಅಳಕೆಮಜಲು ಇವರ ಪ್ರಾಯೋಜಕತ್ವದಲ್ಲಿ ಮಿಲಾದ್ ಕಾನ್ಫರೆನ್ಸ್, ಬುರ್‌ದಾ ಮಜ್ಲಿಸ್, ಸೌಹಾರ್ದ ಸಂಗಮ, ದಫ್ ರಾತೀಬ್, ಮಿಲಾದ್ ಸಂಗಮ ಹಾಗೂ ಸನ್ಮಾನ ಕಾರ್ಯಕ್ರಮವು ಅಳಕೆಮಜಲು ಬದ್ರಿಯಾ ಮಂಝಿಲ್ ತಾಜುಲ್ಉಲಮಾ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೇರಳ-ತ್ರಿಶೂರ್‌ನ ಸಯ್ಯಿದ್ ಅಬೂಬಕ್ಕರ್ ಮುಡೀಸ್ ತಂಙಳ್, ಕರ್ನಾಟಕ ಜಂ-ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಸಯ್ಯಿದ್ ಮುಹಮ್ಮದ್ ತಂಙಳ್ ಕಬಕ ದುವಾಶಿರ್ವಚನಗೈದರು.
ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್ ಸೌಹಾರ್ದ ಸಮ್ಮೇಳನ ಉದ್ಘಾಟಿಸಿದರು. ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಮುಹಮ್ಮದ್ ಶರೀಫ್ ಸಖಾಫಿ ಬುರ್‌ದಾ ಮಜ್ಲಿಸ್ ಉದ್ಘಾಟಿಸಿದರು. ಎಸ್‌ವೈಎಸ್ ಅಳಕೆಮಜಲು ಶಾಖಾಧ್ಯಕ್ಷ ಹಾಜಿ ಮುಹಮ್ಮದ್ ಖಾಸಿಮಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮ್ಮರ್ ಸಖಾಫಿ ಮಿಲಾದ್ ಸಂಗಮ ಉದ್ಘಾಟಿಸಿದರು. ಎಸ್‌ವೈಎಸ್ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆ ವಹಿಸಿದ್ದರು. ಪೆರ್ಲ ಜುಮಾ ಮಸೀದಿ ಮುದರ್ರಿಸ್ ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ, ಸುನ್ನೀ ಜಂ-ಇಯ್ಯತುಲ್ ಉಲಮಾ ಜಿಲ್ಲಾ ಕಾರ್ಯದರ್ಶಿ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಭಾಷಣೈದರು.
ಅಬ್ದುಲ್ ಅಝೀರ್ ಬಾಖವಿ, ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ವಿ.ಎಚ್. ಶಮೀರ್ ಪಳಿಕೆ, ವಿ.ಎಸ್. ಇಬ್ರಾಹಿಂ, ರಾಜಾರಾಮ ಶೆಟ್ಟಿ ಕೋಲ್ಪೆ, ಅಶ್ರಫ್ ಕಲ್ಲೆಗ, ಈಶ್ವರ ನಾಯ್ಕ, ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಹಮೀದ್ ಕಂಬಳಬೆಟ್ಟು, ಪತ್ರಕರ್ತ ಉಮರ್ ನೀರಪಳಿಕೆ-ಬಗ್ಗುಮೂಲೆ, ಕೆ.ಎಸ್. ಮೋಹನ್ ಭಟ್ ಉರಿಮಜಲು, ಬಿ.ಕೆ. ಮುಹಮ್ಮದ್ ಫೈಝಿ ಬಾಳೆಪುಣಿ, ಹಂಝ ಮದನಿ ಮಿತ್ತೂರು, ಸುನ್ನಿ ಫೈಝಿ ಪೆರುವಾಯಿ, ಮುಬಶ್ಶಿರ್ ಅಹ್‌ಸನಿ, ಇಬ್ರಾಹಿಂ ಮದನಿ, ಅಬ್ದುರ್ರಹ್ಮಾನ್ ಸಅದಿ ಕೋಲ್ಪೆ, ಅಬ್ದುಲ್ ಹಮೀದ್ ಸಖಾಫಿ, ಮುಹಮ್ಮದ್ ಫಾಳಿಲಿ ಕಾಮಿಲ್ ಸಖಾಫಿ, ಅಬೂಬಕ್ಕರ್ ಸಖಾಫಿ, ಅಬ್ದುರ್ರಹ್ಮಾನ್ ಸಖಾಫಿ ಕಬಕ, ದಾವೂದ್ ಅಶ್ರಫಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಶಾಫಿ ಸಖಾಫಿ, ಇಬ್ರಾಹಿಂ ಮುಸ್ಲಿಯಾರ್ ಅಳಿಕೆ, ಇಬ್ರಾಹಿಂ ಮುಸ್ಲಿಯಾರ್, ಅಬ್ದುಲ್ ಮಜೀದ್ ಮದನಿ, ಬದ್ರುದ್ದೀನ್ ಹಾಜಿ, ಅಬ್ದುಲ್ ಅಝೀರ್ ಅಮ್ಜದಿ, ರಫೀಕ್ ಸಅದಿ, ಅಬೂಬಕ್ಕರ್ ಅರ್ಹರಿ ಸಖಾಫಿ, ಎನ್.ಪಿ. ಅಬ್ದುರ್ರಹ್ಮಾನ್ ಸಖಾಫಿ ಮಾಪಾಲ್, ಸಲೀಂ ಸಅದಿ, ಅಝರ್ ಸಖಾಫಿ ಅಳಕೆಮಜಲು, ಉಮರುಲ್ ಫಾರೂಕ್ ಹಿಮಮಿ, ಅಬ್ದುಲ್ ಖಾದರ್ ಝುಹ್‌ರಿ ಅಳಕೆಮಜಲು, ಅಬ್ದುಲ್ ರಹಿಮಾನ್ ಹಾಜಿ ಮಸ್ಕತ್, ಮುಹಮ್ಮದ್ ಹಾಜಿ ಅಳಕೆಮಜಲು, ಅಬ್ದುರ್ರಝಾಕ್ ಹಾಜಿ ಅಳಕೆಮಜಲು, ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ, ಅಬ್ದುಲ್ ಹಮೀದ್ ಕನ್ಯಾನ, ಇಕ್ಬಾಲ್ ಬಪ್ಪಳಿಗೆ, ಎಡ್ವಕೇಟ್ ಶಾಕಿರ್ ಹಾಜಿ, ಸೆಲೀಂ ಮುರ, ಸಿ.ಎಚ್. ಮುಹಮ್ಮದ್ ಬಾಳೆಪುಣಿ, ಮೊದು ಹಾಜಿ ಕಂಬಳಬೆಟ್ಟು, ಅಶ್ರಫ್ ಕೆಜಿಎನ್ ಅಳಕೆಮಜಲು, ಕುಂಞಿ ಹಾಜಿ ಕಟ್ಟ, ಅಬ್ದುಲ್ ನಾಸಿರ್ ಕೋಲ್ಪೆ, ಶಾಕಿರ್ ಅಳಕೆಮಜಲು, ಎಂ.ಎಚ್. ಮುಹಮ್ಮದ್ ಹಾಜಿ, ಅಬೂಬಕ್ಕರ್ ನಡುಮಜಲು, ಇಸ್ಮಾಯಿಲ್ ಮಾಸ್ಟರ್, ಉಮರ್ ಬಾಕಿಮಾರು, ಉಸ್ಮಾನ್ ಪೋಳ್ಯ ಬ್ರೈಟ್, ಸಿದ್ದೀಕ್ ಕಬಕ, ಮುಝಮ್ಮಿಲ್ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ತಾಜುಸ್ಸುನ್ನ ಬುರ್‌ದಾ ಸಂಘ ಕೆಮ್ಮಾಯಿ ತಂಡದಿಂದ ಬುರ್‌ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಪ್ರಮುಖ ಆಯೋಜಕರಾದ ಅಬ್ದುರ್ರಹ್ಮಾನ್ (ಪುತ್ತು ಹಾಜಿ) ಅಳಕೆಮಜಲು ಅವರನ್ನು ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ವತಿಯಿಂದ ಸನ್ಮಾನಿಸಲಾಯಿತು. ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಕಾಸಿಂ ಸಖಾಫಿ ಸ್ವಾಗತಿಸಿ, ಎಸ್ಸೆಸ್ಸೆಫ್ ಅಳಕೆಮಜಲು ಶಾಖಾಧ್ಯಕ್ಷ ಹೈದರ್ ಅಲಿ ವಂದಿಸಿದರು. ಅಬ್ದುಸ್ಸಮದ್ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.







