ಬೀಳುವಾಗ ಅಯ್ಯೋ ಎಂದಿದಕ್ಕೆ ವಿದ್ಯಾರ್ಥಿಗೆ ಶಿಕ್ಷೆ ನೀಡಿದ ಇಂಗ್ಲೀಷ್ ಶಾಲೆಯ ಶಿಕ್ಷಕಿ !

ಕೊಚ್ಚಿ,ಡಿ.23: ಬೀಳಲು ಹೋದಾಗ ಅಯ್ಯೋ ಎಂದು ಹೇಳಿದ್ದಕ್ಕೆ ವಿದ್ಯಾರ್ಥಿಗೆ ಅಧ್ಯಾಪಕಿ ಇನ್ನು ಮಲೆಯಾಳಂ ಮಾತಾಡುವುದಿಲ್ಲ ಎಂದು ಐವತ್ತು ಬಾರಿ ಬರೆಸಿದ್ದಾರೆ. ಇಡಪ್ಪಳ್ಳಿ ಶಾಲೆಯೊಂದರ ದೇವಸೂರ್ಯ ಎಂಬ ಐದನೆ ತರಗತಿ ವಿದ್ಯಾರ್ಥಿಗೆ ಅಧ್ಯಾಪಕಿ ಈ ವಿಚಿತ್ರ ಶಿಕ್ಷೆ ನೀಡಿದ್ದಾರೆ. ಶಿಕ್ಷೆಯ ಬಗ್ಗೆ ತಾನು ತಿಳಿದಿಲ್ಲ ಎಂದು ಶಾಲಾ ಪ್ರಿನ್ಸಿಪಾಲ್ ಲೀಲಮ್ಮ ಮ್ಯಾಥ್ಯು ಹೇಳಿದ್ದಾರೆ.ಕ್ಲಾಸಿನಲ್ಲಿ ಆಡುತ್ತಿದ್ದ ವಿದ್ಯಾರ್ಥಿ ದೇವಸೂರ್ಯ ಬೀಳುವಂತದಾಗ ತನಗರಿವಿಲ್ಲದೆ ಅಯ್ಯಾ ಎಂದು ಹೇಳಿಬಿಟ್ಟಿದ್ದ. ಇದನ್ನು ಕೇಳಿದ ಇನ್ನೊಬ್ಬ ವಿದ್ಯಾರ್ಥಿ ಟೀಚರ್‌ಗೆ ದೂರು ನೀಡಿದ್ದ. ನಂತರ ಕ್ಲಾಸ್‌ಗೆ ಬಂದ ಅಧ್ಯಾಪಕಿ ಐವಿಲ್ ನಾಟ್ ಟಾಕ್ ಇನ್ ಮಲೆಯಾಳ
ಎಂದು ಐವತ್ತು ಸಲ ಬರೆಸಿದ್ದಾರೆ ಎನ್ನಲಾಗಿದೆ. ಎರ್ನಾಕುಲಂ ಕಾಂಪಿಯನ್ ಸ್ಕೂಲ್‌ನಲ್ಲಿ ದೇವಸೂರ್ಯ ಐದನೆ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಮಲೆಯಾಳಂ ಮಾತಾಡಿದರೆ ಮಕ್ಕಳ ಅಭಿವೃದ್ಧಿ ಪತ್ರದಲ್ಲಿ ಡಿಮೆರಿಟ್ ಶಾಲೆಯ ರೂಢಿಯಾಗಿದೆ.ಕೇರಳಸರಕಾರ ಆಡಳಿತ ಭಾಷೆ ಮಲೆಯಾಳಂ ಎನ್ನುತ್ತಿದೆ. ಹೊಸಹೊಸ ಯೋಜನಗಳನ್ನೂ ಹಮ್ಮಿಕೊಳ್ಳುತ್ತಿದೆ.ಹೀಗಿರುವಾಗ ಶಾಲೆಗಳಲ್ಲಿ ಮಲೆಯಾಳಂನ ದುಃಸ್ಥಿತಿ ಕೆಲವರಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ ಎಂದು ವರದಿತಿಳಿಸಿದೆ.





