ಕೆಲಸದ ಅವಧಿ ಮುಗಿದ ಕಾರಣ ಹಣ ನೀಡಲು ನಿರಾಕರಣೆ : ಬ್ಯಾಂಕ್‌ನೊಳಗೆ ಸಿಬ್ಬಂದಿಯನ್ನು ಕೂಡಿ ಹಾಕಿದ ಗ್ರಾಹಕರು
.jpg)
ಮುಝಾಫರ್ ನಗರ, ಡಿ.23: ಕೆಲಸದ ಅವಧಿ ಮುಗಿದ ಕಾರಣ ಹಣ ನೀಡಲಾಗುವುದಿಲ್ಲ ಎಂದು ತಿಳಿಸಿದ ಬ್ಯಾಂಕ್‌ನ ಸಿಬ್ಬಂದಿಗಳನ್ನು ಗ್ರಾಹಕರು ಬ್ಯಾಂಕ್‌ನೊಳಗೆ ಕೂಡಿಹಾಕಿ ಬೀಗ ಜಡಿದ ಘಟನೆ ವರದಿಯಾಗಿದೆ.
ಸ್ಟೇಟ್ ಬ್ಯಾಂಕ್‌ನ ಶಾಖೆಯೊಂದರಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್‌ನ ಕೆಲಸದ ಅವಧಿ ಮುಗಿದ ಕಾರಣ ಈ ದಿನ ಹಣ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ ಗ್ರಾಹಕರು ಆಕ್ರೋಶಗೊಂಡು, ಅಧಿಕಾರಿಗಳನ್ನು ಬ್ಯಾಂಕ್‌ನೊಳಗೆ ಕೂಡಿಹಾಕಿ ಬೀಗ ಜಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೀಗ ತೆರವುಗೊಳಿಸಿ ಅಧಿಕಾರಿಗಳು ಹೊರ ಬರಲು ಅವಕಾಶ ಮಾಡಿಕೊಟ್ಟರು ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
Next Story





