ಕೇಜ್ರೀವಾಲ್ ಭೇಟಿಯಾಗಲು ಪೊಲೀಸರ ತಡೆ: ಹಾರ್ದಿಕ್ ಪಟೇಲ್ ಆರೋಪ

ಜೈಪುರ, ಡಿ.23: ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರನ್ನು ಭೇಟಿಯಾಗಲು ಆಗಮಿಸಿದ ತನ್ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಾರ್ದಿಕ್ ಪಟೇಲ್ ಟ್ವೀಟ್ ಮಾಡಿದ್ದಾರೆ. ನಿಮಗೆ ಜೀವಬೆದರಿಕೆ ಇರುವ ಕಾರಣ ನಿಮ್ಮನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಜೈಪುರ ಪೊಲೀಸರು ಕಾರಣ ನೀಡಿದ್ದಾರೆ. ತಾನು ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ತನ್ನನ್ನು ಬಂಧಿಸಬೇಕು ಎಂದು ರಾಜಸ್ತಾನದ ಬಿಜೆಪಿ ಸರಕಾರ ಆದೇಶಿಸಿತ್ತು ಎಂದು ಅವರು ಹೇಳಿದ್ದಾರೆ. ಕೆಲ ಹೊತ್ತು ವಿಐಪಿ ಕೊಠಡಿಯಲ್ಲಿ ಅವರನ್ನು ಕುಳ್ಳಿರಿಸಿದ ಬಳಿಕ ಪೊಲೀಸ್ ಬೆಂಗಾವಲಿನೊಂದಿಗೆ ಅಜ್ಮೇರ್‌ಗೆ ಕರೆದೊಯ್ಯಲಾಯಿತು. ಅಲ್ಲಿಂದ ಅವರನ್ನು ಉದಯ್‌ಪುರಕ್ಕೆ ಕರೆದೊಯ್ಯಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರ ಈ ಕ್ರಮ ತನ್ನ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೂರಿರುವ ಪಟೇಲ್, ತನ್ನನ್ನು ಬಂಧಿಸುವಂತೆ ‘ಮೇಲಿನಿಂದ’ ಆದೇಶ ಬಂದಿರುವುದಾಗಿ ಓರ್ವ ಅಧಿಕಾರಿ ತಿಳಿಸಿದ್ದಾರೆ ಎಂದಿದ್ದಾರೆ.
Next Story





