ತಾಜುಲ್ ಉಲಮಾ ಸುನ್ನಿ ಸೆಂಟರ್ ಕಟ್ಟಡ ಉದ್ಘಾಟನೆ

ಉಳ್ಳಾಲ , ಡಿ.23 : ಜನಪರ ಕಾರ್ಯಗಳಿಗೆ ಹೆಚ್ಚು ಒತ್ತು ಕೊಟ್ಟು ಸೇವೆ ಮಾಡುವ ಮೂಲಕ ಸಂಘಟನೆಯ ಗಾತ್ರ ಹೆಚ್ಚಿಸಬೇಕು ಎಂದು ಅಸ್ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಕೊಯಿಲಾಂಡಿ ಹೇಳಿದರು.
ಅವರು ಮೊಂಟೆಪದವುನಲ್ಲಿ ಎಸ್‌ವೈಎಸ್ ಮತ್ತು ಎಸ್ಸೆಸೆಫ್ ಸಂಘಟನೆಯ ನೇತೃತ್ವದಲ್ಲಿ ನಿರ್ಮಾಣಗೊಂಡ ತಾಜುಲ್ ಉಲಮಾ ಸುನ್ನಿ ಸೆಂಟರ್ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಮಾತನಾಡಿ, ಸಂಘಟನೆಯ ಕಾರ್ಯ ಚಟುವಟಿಕೆಗೆ ಉತ್ತಮ ಕಚೇರಿ ಆಗಿದೆ. ಈ ಕಚೇರಿ ಬಡ ಜನರ ಆಶಾಕಿರಣವಾಗಿರಬೇಕು. ಸ್ವಾರ್ಥ ರಾಜಕಾರಣವನ್ನು ಬದಿಗೊತ್ತಿ ಜನಪರ ಕೆಲಸಗಳಿಗೆ ಆಸ್ಪದ ನೀಡಬೇಕೆಂದು ಕರೆ ನೀಡಿದರು.
ಅಸ್ಸಯ್ಯಿದ್ ಸಈದುದ್ದೀನ್ ತಂಙರ್ಳ ಅಲ್ ಬುಖಾರಿ ಮಲಪ್ಪುರಂ, ಹುಸೈನ್ ಸಅದಿ ಕೆಸಿರೋಡ್, ಎಸ್‌ಎಂಎ ಜಿಲ್ಲಾಧ್ಯಕ್ಷ ಕತ್ತರ್ ಬಾವಾ ಹಾಜಿ, ಎಸ್‌ವೈಎಸ್ ಮಂಜನಾಡಿ ಸೆಂಟರ್ ಕಾರ್ಯದರ್ಶಿ ರಝಾಕ್ ಮದನಿ, ಸಮಿತಿ ಸದಸ್ಯ ಸುಲೈಮಾನ್ ಹಾಜಿ ಸಾಮಣಿಗೆ,ಖಾಲಿದ್ ಹಾಜಿ ಭಟ್ಕಳ, ಇಸ್ಮಾಯಿಲ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.





