ಹಳೆಯಂಗಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

ಮುಲ್ಕಿ, ಡಿ.23: ಹಳೆಯಂಗಡಿ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಭಾಗದ ಅನುದಾನವನ್ನು ಮುಂಡ ಬೀಚ್ ಅಭಿವೃದ್ಧಿ ಪಡಿಸಲು ಬಳಸಬಾರದು. ಅದನ್ನು ಸಸಿಹಿತ್ಲು ಗ್ರಾಮದ ಅಭಿವೃದ್ಧಿಗೆ ಬಳಸಬೇಕೆಂದು ಗ್ರಾಮಸ್ಥರು ಶುಕ್ರವಾರ ಹಳೆಯಂಗಡಿ ಬಿಲ್ಲವ ಸಂಘದಲ್ಲಿ ನಡೆದ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಆಗ್ರಹಿಸಿದರು.
ಈ ಬಗ್ಗೆ ಮಾತನಾಡಿದ ಪಂಚಾಯತ್ ಸದಸ್ಯ ವಸಂತ್ ಬೆರ್ನಾರ್ಡ್, ಸಸಿಹಿತ್ಲು ಪ್ರದೇಶದಿಂದ ಪಂಚಾಯತ್‌ಗೆ ಬರುವ ವರಮಾನ ಕಡಿಮೆ. ಇದರಿಂದ ಬೀಚ್ ಸಹಿತ ಅಲ್ಲಿನ ಅಭಿವೃದ್ಧಿ ಅಸಾಧ್ಯ. ಆದ್ದರಿಮದ ಬೇರೆ ಅನುದಾನಗಳನ್ನು ಬಳಸಿಕೊಂಡು ಅಭಿವ್ರದ್ಧಿ ಪಡಿಸುವುದು ಅನಿವಾರ್ಯ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಸಸಿಹತ್ಲು ನಿವಾಸಿ ಅನಿಲ್ ಕುಂದರ್, ಯಾವುದೇ ಕಾರಣಕ್ಕೂ ಪಂಚಾಯತ್ ಸಸಿಹತ್ಲು ಪ್ರದೇಶದ ಅಭಿವೃದ್ಧಿಗೆ ಬರುವ ಸರಕಾರದ ಅನುದಾನಗಳನ್ನು ಬೀಚ್ ಅಭಿವೃದ್ಧಿಗೆ ಬಳಸಬಾರದು. ಈ ಬಗ್ಗೆ ಸಸಿಹಿತ್ಲು ವಾರ್ಡ್ ಸಭೆಯಲ್ಲಿ ಆಕ್ಷೇಪಿಸಲಾಗಿದೆ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಗೂ ಮೊದಲು ಆಮಂತ್ರಣ ಪತ್ರಿಕೆಯಲ್ಲಿ ಲೆಕ್ಕ ಪತ್ರ ಮಂಡನೆಯ ಅಜೆಂಡಾ ಮುದ್ರಿಸಿಲ್ಲಾ ಎಂದು ಗ್ರಾಮಸ್ಥರಾದ ರಾಮಚಂದ್ರ ಶೆಣೈ ಆರೋಪಿಸಿ ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿದರು.
ಬಳಿಕ ಮೆಸ್ಕಾಂಗೆ ಸಂಬಂಧಿಸಿದ ಮಾಹಿತಿ ನೀಡಿದ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಮೂರ್ತಿ, ನೂರು ರೂ. ಮೆಲ್ಪಟ್ಟ ವಿದ್ಯುತ್ ಬಿಲ್‌ಗಳನ್ನು ನಿಗದಿತ ದಿನಾಂಕದ ಒಳಗಾಗಿ ಪಾವತಿಸಬೇಕು. ಇಲ್ಲದಿದ್ದ ಪಕ್ಷದಲ್ಲಿ ಮರುದಿನವೇ ವಿದ್ಯುತ್ ಫ್ಯೂಸ್ ತೆಗೆಯಲಾಗುವುದು. ಈ ಬಗ್ಗೆ ಮೇಲಾಧಿಕಾರಿಗಳು ಕಟ್ಟು ನಿಟ್ಟಿನ ಆದೇಶ ಮಾಡಿದಾರೆ ಎಂದು ವಿನಂತಿಸಿದರು.
ಅಲ್ಲದೆ, ೀ ಭಾಗದ ವಿದಯುತ್ ಸಮಸ್ಯೆಗಳನ್ನು ಅದ್ಯಯನ ನಡೆಸಿ ಈಗಾಗಲೇ 20 ಲಕ್ಷ ರೂ. ಬೇಡಿಕೆಯನ್ನು ಸರಕಾರ ಮುಂದಿಡಲಾಗಿತ್ತು. ಅದರಲ್ಲಿ 16 ಲಕ್ಷ ರೂ.ಗೆ ಅನುಮೋದನೆ ದೊರೆತಿದ್ದು, 8 ಕಡೆಗಳಲ್ಲಿ ಬ್ರೇಕರ್‌ಗಳನ್ನು ಅಳವಡಿಸಲು ಅನುಮೋದನೆ ದೊರೆತಿದೆ ಎಂದು ಮಾಹಿತಿ ನೀಡಿದರು.
ಬಳಿಕ ನಡೆದ ಪ್ರಶ್ನೋತ್ತರ ವೇಳೆ ಸಣ್ಣ ಪ್ರಮಾಣದ ಬಿಲ್ ಬಾಲಿ ಇದ್ದಲ್ಲಿ ವಿದ್ಯುತ್‌ನ ಫ್ಯೂಸ್ ತೆಗೆಯುವ ಮೆಸ್ಕಾಂ ಪಂಚಾಯತ್‌ಗಳು ದಾರಿದೀಪ, ನೀರಿಗೆ ಸಂಬಂಧಿಸಿದ ವಿದ್ಯುತ್ ಬಿಲ್‌ಗಳ ಪಾವತಿಗೆ ಮೆಸ್ಕಾಂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರಾದ ರಾಮಚಂದ್ರ ಶೆಣೈ ಪ್ರಶ್ನಿಸಿದರು.
ಈ ಬಗ್ಗೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಶ್ರೀನಿವಾಸ್, ಸರಕಾರಿ ಸಂಸ್ಥೆಗಳ ವಿದ್ಯುತ್ ಬಿಲ್ ಪಾವತಿಗೆ ಸರಕಾರ ವಿವಿಧ ಸೂಚನೆಗಳನ್ನು ನೀಡಿವೆ. ಅದರಂತೆ ಪಂಚಾಯತ್ ಅಥವಾ ಪಿಡಿಒ ಆ ಬಗ್ಗೆ ಕ್ರಮ ಕೈಗೊಳ್ಳಲು ಸಾದ್ಯವಿಲ್ಲ ಎಂದು ಉತ್ತರಿಸಿದರು.
ಬಡವರು ಬಿಲ್ ಪಾವತಿಯ ಅಂತಿಮ ದಿನದಂದು ಬಿಲ್ ಪಾವತಿಗಾಗಿ ಲೈನ್ ನಲ್ಲಿ ನೀಮತಿದ್ದರೂ ಫ್ಯೂಸ್ ತೆಯಲಾಗುತ್ತಿದೆ. ಅಲ್ಲದೆ, ಬಿಲ್ ಕಟ್ಟಿದ ಬಳಿಕ ತೆಗೆದ ಫ್ಯೂಸ್ ಅಳವಡಿಸದೇ ಮೆಸ್ಕಾಂ ಇಲಾಖೆಯವರು ಸತಾಯಿಸುವ ಬಗ್ಗೆ ಈಗಾಗಲೇ ಹಲವು ದೂರುಗಳು ಬಂದಿವೆ. ಇದರಲ್ಲಿ ಪಂಚಾಯತ್‌ನ ಸದಸ್ಯರೊಬ್ಬರಿಗೂ ಇದೇ ರೀತಿ ಮಡಿದ್ದಾರೆ. ಪಮಚಾಯತ್ ಸದಸ್ಯರಿಗೇ ಈ ಸ್ಥಿತಿಯಾದರೆ ಸಾಮಾನ್ಯಸ ಸ್ಥಿತಿ ಹೇಗುಇರಬೇಕು. ಈಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಅಬ್ದುಲ್ ಕಾದರ್ ಆಗ್ರಹಿಸಿದರು.
ಸಸಿಹಿತ್ಲು ಭಾಗದ ವಿದ್ಯುತ್ ಸಮಸ್ಯೆಯನ್ನು ಸಭೆಯ ಮುಂದಿಡಲು ಮುಂದಾದ ಗ್ರಾಮಸ್ಥರೊಬ್ಬರಿಗೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ, ಅದು ಸುರತ್ಕಲ್ ಮೆಸ್ಕಾಂಗೆ ಒಳಪಡುವುದರಿಂದ ಆ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ ಎಂದರು. ಇದ್ದಕ್ಕೆ ಆಕ್ಷೇಪಿಸಿದ ಗ್ರಾಮಸ್ಥರು, ಈ ಬಗ್ಗೆ ಯಾರಲ್ಲಿ ಕೇಳಬೇಕು ಎಂದು ಎಂದು ನೋಡೆಲ್ ಧುಇಕಾರಿಯ ಗಮನಕ್ಕೆ ತಂದರು. ಸಸಿಹಿತ್ಲು ಪ್ರದೇಶವು ಮೆಸ್ಕಾಂ ಮತ್ತು ಪೊಲೀಸ್ ಸಂಬಂದಿತ ಪ್ರಕರಣಗಳ ಇತ್ಯರ್ಥಕ್ಕೆ ಸುರತ್ಕಲ್‌ಗೆ ಸಂಬಮಧಿಸಿರುವುದರಿಂದ ಮುಂದಿನ ಸಭೆಗಳಲ್ಲಿ ಸುರತ್ಕಲ್ ಪೊಲೀಸರು ಹಾಗು ಮೆಸ್ಕಾಂ ಇಲಾಖೆಯ ಅಧಿಕಾರಿಗಳೂ ಭಾಗವಹಿಸುವಂತೆ ಮಾಡಬೇಕೆಂದು ನೋಡಿಕೊಳ್ಳಬೇಕು ಎಂದು ಸಭೆಯ ನೋಡೆಲ್ ಅಧಿಕಾರಿ ಶ್ಯಾಮಲಾ ಸಿಕೆ. ಪಿಡಿಒ ಅವರಿಗೆ ಸೂಚಿಸಿದರು.
ಬಳಿಕ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಗಳ ಮಾಹಿತಿಗಳನ್ನು ಸಭೆಗೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ ವಹಿಸಿದ್ದರು.
ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ಯಾಮಲಾ ಸಿ.ಕೆ. ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದರು.
ಇಂಜಿನಿಯರ್ ಪ್ರಶಾಂತ್ ಆಳ್ವ, ಮೆಸ್ಕಾಂನ ಶ್ರೀನಿವಾಸ ಮೂರ್ತಿ, ಶ್ರೀಮತಿ ಮಾಧುರಿ, ಪ್ರಭಾಕರ ಟಿ.ಶೆಟ್ಟಿ, ಕೆ. ಕಾವೇರಿ, ಪಂಚಾಯತ್ ಉಪಾಧ್ಯಕ್ಷೆ ಪಧ್ಮಾವತಿ, ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್ ಪ್ರಕಾಶ್, ಪಂಚಾಯತ್ ಪಿಡಿಒ ಅಬೂಬಕರ್, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗರಾಮಸ್ಥರು ಭಾಗವಹಿಸಿದ್ದರು.







