ಅಂಡರ್-19 ಏಷ್ಯಾ ಕಪ್ ; ಭಾರತ ಹ್ಯಾಟ್ರಿಕ್ ಚಾಂಪಿಯನ್
ಶ್ರೀಲಂಕಾ ವಿರುದ್ಧ 34 ರನ್‌ಗಳ ಜಯ

ಕೊಲಂಬೊ, ಡಿ.23: ಇಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 34 ರನ್‌ಗಳ ಜಯ ಗಳಿಸಿದ ಭಾರತ ಹ್ಯಾಟ್ರಿಕ್ ಚಾಂಪಿಯನ್ ಅಗಿ ಟ್ರೋಫಿಯನ್ನು ಬಾಚಿಕೊಂಡಿದೆ.
ಭಾರತ ಈ ಮೊದಲು ಯುಎಇ(2014) ಮತ್ತು ಮಲೇಷ್ಯಾ(2012)ದಲ್ಲಿ ನಡೆದ ಏಷ್ಯಾ ಕಪ್ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಜಯಿಸಿತ್ತು.
ಇಲ್ಲಿನ ಆರ್.ಪ್ರೇಮ್‌ದಾಸ್ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಗೆಲುವಿಗೆ 274 ರನ್‌ಗಳ ಸವಾಲನ್ನು ಪಡೆದ ಶ್ರೀಲಂಕಾ ತಂಡ ಭಾರತದ ನಾಯಕ ಅಭಿಷೇಕ್ ಶರ್ಮ (37ಕ್ಕೆ 4) ದಾಳಿಗೆ ದಾಳಿಗೆ ಸಿಲುಕಿ 48.4 ಓವರ್‌ಗಳಲ್ಲಿ 239 ರನ್‌ಗಳಿಗೆ ಆಲೌಟಾಗಿದೆ.
ಶ್ರೀಲಂಕಾ ತಂಡದ ಆರಂಭ ಚೆನ್ನಾಗಿತ್ತು. ಆರಂಭದಲ್ಲಿ 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿತ್ತು.4ನೆ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್ ಕೀಪರ್ ಚತುರಂಗ (13) ಅವರು ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ರೆವೆನ್ ಕೆಲೈ, ಮತ್ತು ಹಾಸಿತಾ ಬೊಯಾಗೊಡಾ ತಂಡದ ಸ್ಕೋರ್‌ನ್ನು 18 ಓವರ್‌ಗಳಲ್ಲಿ 105ಕ್ಕೆ ಏರಿಸಿದ್ದರು. 37 ರನ್ ಗಳಿಸಿ ಬೊಯಾಗೊಡಾ ಅವರು ಅಭಿಷೇಕ್‌ಗೆ ವಿಕೆಟ್ ಒಪ್ಪಿಸಿದರು.
ನಾಯಕ ಕಮಿಂಡು ಮೆಂಡಿಸ್(53), ರೆವೆನ್ (62) ಅರ್ಧಶತಕದ ಕೊಡುಗೆ ನೀಡಿದರೂ, ತಂಡ ಗೆಲುವಿನ ದಡ ಸೇರಲಿಲ್ಲ.
ಬ್ಯಾಟಿಂಗ್ ಲೆಜೆಂಡ್ ರಾಹುಲ್ ದ್ರಾವಿಡ್ ಕೋಚ್ ಆಗಿರುವ ಭಾರತದ ತಂಡ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿತ್ತು. ಆರಂಭಿಕ ದಾಂಡಿಗ ಹಿಮಾಂಶು ರಾಣಾ(71), ಶುಬ್‌ಮನ್ ಗಿಲ್ (70) ಉಪಯುಕ್ತ ಅರ್ಧಶತಕಗಳ ಕೊಡುಗೆ ಮತ್ತು ಪಾರ್ಥಿವ್ ಶಾವ್(39), ಅಭಿಷೇಕ್ ಶರ್ಮ(29), ಎಸ್.ಎಫ್ ಖಾನ್(26) ಮತ್ತು ನಾಗರ್‌ಕೋಟಿ(23) ಅವರ ಎರಡಂಕೆಯ ಸಹಾಯದಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 273 ರನ್ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರ್ ವಿವರ
ಭಾರತ ಅಂಡರ್ 19 ತಂಡ: 50 ಓವರ್‌ಗಳಲ್ಲಿ 273/8( ರಾಣಾ71, ಗಿಲ್ 70; ರಾನ್‌ಸಿಕಾ 50ಕ್ಕೆ 3, ಜಯವಿಕ್ರಮ 53ಕ್ಕೆ 3 )
ಶ್ರೀಲಂಕಾ ಅಂಡರ್ 19 ತಂಡ: 48.4 ಓವರ್‌ಗಳಲ್ಲಿ ಆಲೌಟ್ 239(ಕಮಿಂಡು ಮೆಂಡಿಸ್53, ರೆವೆನ್ 62;ಅಭಿಷೇಕ್ ಶರ್ಮ 37ಕ್ಕೆ 4)
ಪಂದ್ಯಶ್ರೇಷ್ಠ: ಅಭಿಷೇಕ್ ಶರ್ಮ
ಸರಣಿಶ್ರೇಷ್ಠ: ಎಚ್.ಜೆ. ರಾಣಾ .







