ಒಬ್ಬ ಸಿಖ್ ಐಎಎಫ್ ಅಧಿಕಾರಿ ಗಡ್ಡ ಬೆಳೆಸಬಹುದಾದರೆ ಮುಸ್ಲಿಂ ಅಧಿಕಾರಿ ಯಾಕೆ ಬೆಳೆಸಬಾರದು?

ಓರ್ವ ನಿವೃತ್ತ ಸಿಖ್ ಐಎಎಫ್ ಅಧಿಕಾರಿಯಾಗಿ ಸದ್ಯ ಬ್ರೆಕ್ಸಿಟ್ ಪಾಶ್ಚಾತ್ಯ ಅತಿಸೂಕ್ಷ್ಮವಾಗಿರುವ ಬ್ರಿಟನ್‌ನಲ್ಲಿ ನಾನು ಜೀವಿಸುತ್ತಿದ್ದೇನೆ ಮತ್ತು ಅಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಲವು ಬಾರಿ ತಾರತಮ್ಯವನ್ನು ಅನುಭವಿಸಿರುವ ನಾನು ಮುಹಮ್ಮದ್ ಜುಬೈರ್‌ಗೆ ಬೆಂಬಲವಾಗಿ ನಿಲ್ಲುತ್ತೇನೆ.
‘‘ನಿಮ್ಮ ಗಡ್ಡವನ್ನು ಕಳೆದುಕೊಳ್ಳಿ ಸೈನಿಕರೇ! ಕೇವಲ ವಾಯುಪಡೆಯ ಸಿಖ್ ಅಧಿಕಾರಿಗಳು ಮಾತ್ರ ಗಡ್ಡ ಬೆಳೆಸಬಹುದು ಮುಸ್ಲಿಮ್ ಅಧಿಕಾರಿಗಳಲ್ಲ ಎಂದು ನ್ಯಾಯಾಲಯ ಖಚಿತಪಡಿಸಿದೆ’’ ಎಂಬ ಪತ್ರಿಕೆಯ ಒಂದು ಶೀರ್ಷಿಕೆ ನಾನು ಹೀಗೆಯೇ ಸಾಮಾಜಿಕ ಜಾಲತಾಣವನ್ನು ಜಾಲಾಡಿಸುತ್ತಿದ್ದಾಗ ನನ್ನನ್ನು ಕಂಡು ಅರಚುತ್ತಿತ್ತು. ನಂತರ ಅದಕ್ಕೆ ಸಂಬಂಧಪಟ್ಟ ವಿಷಯವನ್ನು ನಾನು ನಂಬುವಂತಹ ಸುದ್ದಿ ಮಾಧ್ಯಮದಲ್ಲಿ (ಅದು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ) ಹುಡುಕಿದೆ. ಓರ್ವ ನಿವೃತ್ತ ಸಿಖ್ ಐಎಎಫ್ ಅಧಿಕಾರಿಯಾಗಿ ಸದ್ಯ ಬ್ರೆಕ್ಸಿಟ್ ಪಾಶ್ಚಾತ್ಯ ಅತಿಸೂಕ್ಷ್ಮವಾಗಿರುವ ಬ್ರಿಟನ್‌ನಲ್ಲಿ ನಾನು ಜೀವಿಸುತ್ತಿದ್ದೇನೆ ಮತ್ತು ಅಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಲವು ಬಾರಿ ತಾರತಮ್ಯವನ್ನು ಅನುಭವಿಸಿರುವ ನಾನು ಮುಹಮ್ಮದ್ ಝುಬೈರ್‌ಗೆ ಬೆಂಬಲವಾಗಿ ನಿಲ್ಲುತ್ತೇನೆ. ವಿಷಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಕೋಲಾಹಲದ ಕುರಿತು ಅದೊಂದು ದಿನ ಗೆಳೆಯರ ಜೊತೆ ಚಹಾ ಕುಡಿಯುತ್ತಾ ಚರ್ಚೆ ಆರಂಭಿಸಿದೆವು. ಈ ವಿಷಯ ಎರಡು ಸಮುದಾಯಗಳನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿದ್ದು ಮಾತ್ರವಲ್ಲ ಸಮುದಾಯಗಳ ಒಳಗೆಯೂ ಭಿನ್ನಾಭಿಪ್ರಾಯ ಮೂಡುವಂತೆ ಮಾಡಿದೆ. ವೈಚಾರಿಕ ಧ್ವನಿಗಳು ಕಡಿಮೆಯಾಗಿ ಅವೈಚಾರಿಕ ಧ್ವನಿಗಳು ಹೆಚ್ಚು ಶಬ್ದ ಮಾಡುತ್ತಿವೆ. ಕಾಫಿ ಜೊತೆಗಿನ ಚರ್ಚೆಯಲ್ಲಿ ಗೆಳೆಯರು ಪರಸ್ಪರ ಕತ್ತಿ ಮಸೆಯಲಾರಂಭಿಸಿದ್ದರು. ಧಾರ್ಮಿಕ ಆಚರಣೆಯ ಪ್ರಶ್ನೆ
‘‘ನೀನು ಮುಹಮ್ಮದ್ ಝುಬೈರ್ ಜೊತೆಗಿದ್ದಿ ಎಂದರೆ ಅದರ ಅರ್ಥವೇನು?’’ ಒಬ್ಬಾಕೆ ಭಾವೋದ್ವೇಗದಿಂದಲೇ ನನ್ನನ್ನು ಕೇಳಿದರು. ಆಕೆಯ ಪ್ರಕಾರ ಆತನ ಬಗ್ಗೆ ಸಹಾನೂಭೂತಿ ತೋರಿಸಿದರೆ ಅಷ್ಟೇ ಸಾಕು, ಆತನ ಜೊತೆ ನಿಲ್ಲುವುದೆಂದರೆ ಅದು ಸ್ವಲ್ಪಹೆಚ್ಚಾದಂತೆ ಕಾಣುತ್ತದೆ. ‘‘ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಮಾತಿನ ಮಧ್ಯೆಯೇ ಈ ವಿಷಯದ ಬಗ್ಗೆ ಗೂಗಲ್‌ನಲ್ಲಿ ಜಾಲಾಡಿ ತಿಳಿದುಕೊಂಡ ಒಬ್ಬಾಕೆ ಹೇಳುತ್ತಾ ನನ್ನ ಗಮನವನ್ನು ಕಾನೂನು ವಿವರಣೆಯತ್ತ ಸೆಳೆದರು. ಡೈಲಿ ಮೇಲ್ ಪತ್ರಿಕಾ ಹಗರಣಗಳನ್ನು ಇಷ್ಟಪಡುತ್ತದೆ ಮತ್ತು ಇದು ಬ್ರೆಕ್ಸಿಟ್ ನಂತರ ಅದಕ್ಕೆ ಸಿಕ್ಕ ಹಸಿಹಸಿ ವಿಷಯ ಅಷ್ಟೆ. ಆ ಬಗ್ಗೆ ನೀನು ಅಷ್ಟು ಗಂಭೀರವಾಗಿ ಯೋಚಿಸಬೇಕಾಗಿಲ್ಲ ಎಂದಳಾಕೆ. ‘‘ಇದು ಭಾರತದ ಹೊರಗೆ ಸಿಖ್ ಪುರುಷರ ಗುರುತನ್ನು ತಿಳಿಸುತ್ತದೆ. ಮುಖ್ಯವಾಗಿ ಅವರನ್ನು ಮುಸ್ಲಿಮರೆಂದು ತಪ್ಪಾಗಿ ಅರ್ಥೈಸಿಕೊಳ್ಳುವ ಅಮೆರಿಕದಂತಹ ದೇಶಗಳಲ್ಲಿ’’ ಎಂದರು ಮೂರನೆಯಾಕೆ. ಈಕೆಯ ಪರಿವಾರದ ಬಹುತೇಕ ಸದಸ್ಯರು ಅಫ್ಘಾನಿಸ್ತಾನದಿಂದ ವಲಸೆ ಹೋದ ನಂತರ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.
ಇದನ್ನು ಖಚಿತಪಡಿಸಿಕೊಳ್ಳಲು ನಾನು ಬ್ರಿಟನ್‌ನಲ್ಲಿ ಸಿಖ್ ಗುರುತಿನ ವಿಷಯಕ್ಕೆ ಸಂಬಂಧಪಟ್ಟಂತೆ ಕಾರ್ಯಪ್ರವೃತ್ತವಾಗಿರುವ ಸಂಘಟನೆಗಳನ್ನು ಸಂಪರ್ಕಿಸಿದೆ, ಮುಖ್ಯವಾಗಿ ಪ್ರತ್ಯೇಕ ಸಿಖ್ ರೆಜಿಮೆಂಟ್ ಬೇಕು ಎಂದು ಒತ್ತಾಯಪಡಿಸುವಂಥವುಗಳ ಜೊತೆ. ಆದರೆ ಕೇವಲ ಎರಡು ಸಂಘಟನೆಗಳು ಮಾತ್ರ ಪ್ರತಿಕ್ರಿಯಿಸಿದವು. ಸಿಖ್ ಕೌನ್ಸಿಲ್ ಎಂಬುದು ಬ್ರಿಟನ್‌ನಲ್ಲಿ ಶ್ರೇಷ್ಠ ಸಿಖ್ ಮಂಡಳಿಯಾಗಿದ್ದು ಸಮುದಾಯಕ್ಕೆ ಸಂಬಂಧಿಸಿದ ನೀತಿ ನಿರ್ಣಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ನವಹಕ್ಕು ಉಲ್ಲಂಘನೆ
ವೈಯಕ್ತಿಕವಾಗಿ ನನಗೇನನ್ನಿಸುತ್ತದೆಯೆಂದರೆ ಸಿಖ್ ಸಮುದಾಯ ರಾಜಕೀಯ ಲಾಬಿ ಮತ್ತು ಕಾನೂನು ಪ್ರತಿನಿಧಿತ್ವದ ಮೂಲಕ ತನ್ನ ಸ್ಥಾನಮಾನವನ್ನು ಉತ್ತಮಗೊಳಿಸಿದ್ದರೂ ಅದರ ಹೋರಾಟ ಮಾತ್ರ ಇನ್ನೂ ಬಹಳ ದೂರ ಸಾಗಬೇಕಿದೆ. ಬ್ರಿಟನ್‌ನ ರಕ್ಷಣಾ ಸಚಿವರು ಇತ್ತೀಚೆಗಷ್ಟೇ ಸಿಖ್ ರೆಜಿಮೆಂಟ್ ಪ್ರಸ್ತಾಪಕ್ಕೆ ಹಿನ್ನಡೆಯುಂಟು ಮಾಡಿದ್ದಾರೆ ಮತ್ತು ಧಾರ್ಮಿಕ ನೆಲೆಯಲ್ಲಿ ನಡೆಸಲಾಗುವ ಪ್ರತಿಯೊಂದು ನೇಮಕಾತಿಗಳನ್ನು ಪ್ರತ್ಯೇಕ ನೆಲೆಗಳ ಮೇಲೆ ನಡೆಸಲು ಪೆಂಟಗನ್ ಅವಕಾಶ ನೀಡಿದೆ. ನನ್ನ ಪ್ರಕಾರ ಸಿಖ್‌ಗಳಾಗಿ ನಾವು ಗುರು ತೇಜ್ ಬಹದೂರ್ ಅವರ ತ್ಯಾಗವನ್ನು ಮಾತು ಮತ್ತು ಕೃತಿಗಳಲ್ಲಿ ಅನುಸರಿಸಬೇಕು. ಇದುವರೆಗೆ ಬಹಳಷ್ಟು ಬಾರಿ ನಾವು ವೈಯಕ್ತಿಕ ಮತ್ತು ಆಯ್ದ ಹೋರಾಟಗಳನ್ನು ನಡೆಸುತ್ತಿದ್ದೆವು ಮತ್ತು ಅವುಗಳಲ್ಲಿ ಕೆಲವೊಂದನ್ನು ಗೆದ್ದೆವು ಮತ್ತು ಇನ್ನು ಕೆಲವನ್ನು ಸೋತೆವು. ನಾವು ಮಾನವಹಕ್ಕು ಉಲ್ಲಂಘನೆಯ ಬಗ್ಗೆ ಇಡೀ ಜಗತ್ತಿಗೆ ಕೇಳುವಂತೆ ನಮ್ಮ ಧ್ವನಿಯನ್ನು ಎತ್ತಬೇಕು ಮತ್ತು ಜಗತ್ತಿಗೆ ಕೇವಲ 1984ರ ಭಯಾನಕ ಕ್ಷಣಗಳನ್ನೇ ವಿವರಿಸುತ್ತಾ ನೆಮ್ಮದಿಪಟ್ಟುಕೊಳ್ಳಬಾರದು. ಪ್ರತಿ ಬಾರಿಯಂತೆ ನಾನು ಎಲ್ಲರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವಹಕ್ಕಿನ ಪರವಾಗಿ ನಿಲ್ಲಬೇಕು. ಗುರುತಿಗಾಗಿ ಹೋರಾಟ
ಸರ್ವೋಚ್ಚ ನ್ಯಾಯಾಲಯದ ಈ ಆದೇಶದ ವಿರುದ್ಧ ಅನಿಸಿಕೆ ಹೊಂದಿದ್ದರೆ ಈ ಬಗ್ಗೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವವರ ಬೆಂಬಲಕ್ಕೆ ನಿಲ್ಲಬೇಕಾದುದು ಭಾರತದಲ್ಲಿರುವ ಮುಸ್ಲಿಂ ಸಮುದಾಯದ ಕೆಲಸ ಎಂಬುದರಲ್ಲಿ ಎರಡು ಮಾತಿಲ್ಲ. ನಾವು ನಮ್ಮ ಧಾರ್ಮಿಕ ಪ್ರಸ್ತಾವನೆಗಳ ಬಗ್ಗೆ ಸರಕಾರ ಗಮನಹರಿಸಲು ಮತ್ತು ಕಾರ್ಯೋನ್ಮುಖವಾಗಲು ಲಾಬಿಗಳನ್ನು ನಡೆಸುವಂತೆ ಮುಸ್ಲಿಮರು ತಮ್ಮ ಗುರಿ ತಲುಪಲು ಇದೇ ಮಾದರಿಯ ಲಾಬಿಯನ್ನು ಮಾಡಬೇಕು. ಕೇವಲ ಮುಸ್ಲಿಮರು ಮಾತ್ರ ಯಾಕೆ? ತನ್ನ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಬೆಂಬಲ ನೀಡುತ್ತಿಲ್ಲ ಎಂದು ಗೊತ್ತಾದಾಗ ಪ್ರತಿಯೊಬ್ಬರೂ ಹೀಗೆ ಮಾಡಬೇಕು.
ಜಗತ್ತಿನಲ್ಲಿರುವ ಎಲ್ಲಾ ಮುಹಮ್ಮದ್ ಝುಬೈರ್‌ರು ಗುರುತಿಗಾಗಿ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ನಡೆಸುವ ಹೋರಾಟ ಬಹುದೀರ್ಘವಾದುದು. ಅದಕ್ಕೆ ಉತ್ತಮ ಕಾನೂನಿನ ನೆಲೆ, ಆರ್ಥಿಕ ಮತ್ತು ಲಾಬಿಯ ಬೆಂಬಲ, ಸಮುದಾಯದ ಪ್ರೋತ್ಸಾಹ, ವೈಯಕ್ತಿಕ ಬದ್ಧತೆ, ನಂಬಿಕೆಯ ಅಗತ್ಯವಿದೆ.
ಹೆಗಲು ಕೊಡುತ್ತೇವೆ
‘‘ಗಡ್ಡ ಬೆಳೆಸುವುದು ಒಂದು ಧಾರ್ಮಿಕ ಅಗತ್ಯ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ಪ್ರತಿವಾದಿಗಳ ಮೇಲಿದೆ. ಅದನ್ನು ಅವರು ಸಾಬೀತುಪಡಿಸಿದರೆ ನಾವು ಅವರ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ’’
-ಸುಖ್‌ವಿಂದರ್ ಸಿಂಗ್, ಅಧ್ಯಕ್ಷರು, ಅಂತಾರಾಷ್ಟ್ರೀಯ ಖಾಲ್ಸಾ ಸಂಘಟನೆ ಮತ್ತು ಸಿಖ್ ಸಂಘಟನೆಗಳ ಮಂಡಳಿಯ ಸದಸ್ಯರು.
ಹಕ್ಕನ್ನು ಕಸಿಯುತ್ತಿದೆ
‘‘ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕಾದುದು ಸರಕಾರದ ಕೆಲಸ ಎಂಬುದು ನಮ್ಮ ಅನಿಸಿಕೆ. ಮುಸ್ಲಿಮರು ಗಡ್ಡವನ್ನು ಬೆಳೆಸುವುದು ಇಸ್ಲಾಮಿನಲ್ಲಿ ಅಗತ್ಯವಾಗಿದ್ದರೆ ಸರ್ವೋಚ್ಚ ನ್ಯಾಯಾಲಯ ಅವರಿಂದ ಈ ಹಕ್ಕನ್ನು ಯಾಕೆ ಕಸಿಯುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಸಿಖ್ ಕೌನ್ಸಿಲ್ ಯುಕೆ ಸಿಖ್ ಸಂಪ್ರದಾಯಗಳನ್ನು ಆಧರಿಸಿದ್ದು ನಂಬಿಕೆಯ ಹಕ್ಕಿನ ಪರವಾಗಿ ನಿಲ್ಲುತ್ತದೆ.’’
-ಗುರ್ಮೈಲ್ ಸಿಂಗ್ ಕಂಡೋಲಾ, ಸಿಖ್ ಕೌನ್ಸಿಲ್ ಯುಕೆಯ ಪ್ರಧಾನ ಕಾರ್ಯದರ್ಶಿ.







