ಉಳ್ಳಾಲ ಟಿಪ್ಪುಸುಲ್ತಾನ್ ಶಾಲೆಯಲ್ಲಿ ಆಹಾರೋತ್ಸವ

ಮಂಗಳೂರು, ಡಿ.23: ವ್ಯವಹಾರ ಜ್ಞಾನ, ನಾಯಕತ್ವ ಗುಣ, ಗ್ರಾಹಕ ಮತ್ತು ಮಾಲಕರ ನಡುವಿನ ಸಂಬಂಧ, ವಸ್ತುಗಳ ಗುಣಮಟ್ಟ ತಿಳಿಯುವ ಅವಕಾಶವು ಆಹಾರೋತ್ಸವ ಮೇಳದಿಂದ ವಿದ್ಯಾರ್ಥಿಗಳಿಗೆ ಸಿಗುತ್ತದೆ ಎಂದು ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಇಬ್ರಾಹೀಂ ಹೇಳಿದರು.
ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಕೋಟೆಪುರ ಅನುದಾನಿತ ಟಿಪ್ಪುಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಆಹಾರೋತ್ಸವ ಮೇಳ-2016 ಉದ್ಘಾಟಿಸಿ ಅವರು ಮಾತಾಡಿದರು.
ಸರಕಾರದಿಂದ 8ನೆ ತರಗತಿಯ ವಿದ್ಯಾರ್ಥಿಗಳಿಗೆ ನೀಡಲ್ಪಡುವ ಉಚಿತ ಸೈಕಲ್‌ನ್ನು ಉಳ್ಳಾಲ ನಗರ ಸಭೆಯ ಅಧ್ಯಕ್ಷ ಹುಸೈನ್ ಕುಂಞಿಮೋನು ವಿತರಿಸಿದರು. ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷ ಮೋನು ಇಸ್ಮಾಯೀಲ್ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಜತೆ ಕಾರ್ಯದರ್ಶಿ ಎ.ಕೆ.ಮುಹಿಯುದ್ದೀನ್, ಆಡಳಿತಾಧಿಕಾರಿ ಅಬ್ದುಲ್ಲತೀಫ್, ಒಂಬತ್ತುಕೆರೆ ಐಟಿಐ ಕಾಲೇಜಿನ ಪ್ರಾಂಶುಪಾಲ ರತ್ನಾಕರ, ಹಝ್ರತ್ ಸೈಯದ್ ಮದನಿ ಬನಾತ್ ಕಾಲೇಜಿನ ಪ್ರಾಂಶುಪಾಲೆ ಝಾಹಿದಾ ಜಲೀಲ್, ಹೆಣ್ಣು ಮಕ್ಕಳ ಪಪೂ ಕಾಲೇಜಿನ ಪ್ರಾಂಶುಪಾಲೆ ಡಾ.ಸಂಗೀತಾ, ಕಲ್ಲಾಪು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನಸೀಮಾ ಬಶೀರ್, ಆಝಾದ್‌ನಗರ ಹೆಣ್ಣು ಮಕ್ಕಳ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಭಾರತಿ, ಕಲ್ಲಾಪು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಭಾ, ಚೆಂಬುಗುಡ್ಡೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿಕ್ಟೋರಿಯಾ ಗ್ಲಾಡಿಸ್, ಸ್ಥಳಿಯರಾದ ಯು.ಕೆ.ಇಸ್ಮಾಯೀಲ್ ಉಪಸ್ಥಿತರಿದ್ದರು.
ಟಿಪ್ಪುಸುಲ್ತಾನ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಸ್ವಾಗತಿಸಿದರು. ಮುಹಮ್ಮದ್ ಫಾಝಿಲ್ ವಂದಿಸಿದರು. ಚಿತ್ರಕಲಾ ಶಿಕ್ಷಕ ಬಿ.ಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.





