ಆಸ್ಪತ್ರೆಯಲ್ಲೇ ನರ್ಸ್ ಮೇಲೆ ಅತ್ಯಾಚಾರ
ಮಥುರಾ, ಡಿ.23: ಖಾಸಗಿ ಆಸ್ಪತ್ರೆಯೊಂದರಲ್ಲಿ 25ರ ಹರೆಯದ ನರ್ಸ್ ಒಬ್ಬಳ ಮೇಲೆ ಆಸ್ಪತ್ರೆಯ ಅಧೀಕ್ಷಕ ಸಹಿತ ಮೂವರು ಸಿಬ್ಬಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಪೊಲೀಸರಿಂದು ತಿಳಿಸಿದ್ದಾರೆ. ಚಂದ್ರಕಲಾ ಆಸ್ಪತ್ರೆಯ ಸ್ಟಾಫ್ ನರ್ಸ್ ಒಬ್ಬಳ ದೂರಿನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಮಹಿಳಾ ಆಸ್ಪತ್ರೆಗೆ ಕಳುಹಿಸಲಾಗಿದೆಯೆಂದು ಎಎಸ್ಪಿ ಕುನ್ವರ್ ಅನುಪಮ್ ಸಿಂಗ್ ತಿಳಿಸಿದ್ದಾರೆ.
ಆಸ್ಪತ್ರೆಯ ಅಧೀಕ್ಷಕ ಡಾ.ಕುಶಲ್ ಪಾಲ್, ಆತನ ಭಾವ ಪ್ರಮೋದ್, ಆಸ್ಪತ್ರೆಯ ಸಿಬ್ಬಂದಿ ರೂಪ್‌ಕಿಶೋರ್ ಹಾಗೂ ಶ್ರೀಕೃಷ್ಣ ಉಪಾಧ್ಯಾಯ ಎಂಬವರು ನರ್ಸ್ ಅನ್ನು ಆಸ್ಪತ್ರೆಯ ಕೊಠಡಿಯೊಂದಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದರೆಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
Next Story





