ಉಡುಪಿ: ಯಕ್ಷನಿಧಿ ಡೈರಿ-2017 ಬಿಡುಗಡೆ

ಉಡುಪಿ, ಡಿ.23: ಕರಾವಳಿಯ ಮೂರು ಜಿಲ್ಲೆಗಳ ಯಕ್ಷಗಾನ ಕಲಾವಿದರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನೊಳಗೊಂಡ ‘ಯಕ್ಷನಿಧಿ ಡೈರಿ-2017’ನ್ನು ಶುಕ್ರವಾರ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಉದ್ಯಾವರದ ಉದ್ಯಮಿ ಸಾಧು ಸಾಲ್ಯಾನ್ ಅನಾವರಣಗೊಳಿಸಿದರು.
ಇದರೊಂದಿಗೆ ‘ಶಿಕ್ಷಾ ಸಹಯೋಗ’ ಯೋಜನೆಯಡಿ 58 ಯಕ್ಷಗಾನ ಕಲಾವಿದರ ಮಕ್ಕಳಿಗೆ ತಲಾ 1,200ರೂ.ಗಳಂತೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಇದರೊಂದಿಗೆ ‘ಶಿಕ್ಷಾ ಸಹಯೋಗ’ ಯೋಜನೆಯಡಿ 58 ಯಕ್ಷಗಾನ ಕಲಾವಿದರ ಮಕ್ಕಳಿಗೆ ತಲಾ 1,200ರೂ.ಗಳಂತೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿದರು.
ಉಪಾಧ್ಯಕ್ಷರಾದ ಎಸ್. ವಿ. ಭಟ್, ಎಂ. ಗಂಗಾಧರ್ ರಾವ್ ಹಾಗೂ ಕೋಶಾಧಿಕಾರಿ ಕೆ. ಮನೋಹರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದರು.
Next Story





