ಚಂದಹಿತ್ಲು: ನಾಳೆ ಮೀಲಾದ್ ಫೆಸ್ಟ್
ಕೊಣಾಜೆ, ಡಿ.23: ಯುನೈಟೆಡ್ ಬ್ರದರ್ಸ್ ಚಂದಹಿತ್ಲು ಮೊಂಟೆಪದವು ಇದರ 2ನೆ ವಾರ್ಷಿಕೋತ್ಸವದ ಪ್ರಯುಕ್ತ ಮೀಲಾದ್ ಫೆಸ್ಟ್-2016 ಕಾರ್ಯಕ್ರಮವು ಡಿ.25ರಂದು ಚಂದಹಿತ್ಲಿನಲ್ಲಿ ನಡೆಯಲಿದೆ. ಮಧ್ಯಾಹ್ನ 2:30ಕ್ಕೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವೌಲಿದ್ ಮಜ್ಲಿಸ್ ನಡೆಯಲಿರುವುದು. ಸಂಜೆ 6ಕ್ಕೆೆ ನಡೆಯುವ ಮುಹಬ್ಬತೆ ರಸೂಲುಲ್ಲಾಹಿ ಕಾರ್ಯಕ್ರಮವನ್ನು ಸುನ್ನಿ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಶೈಖುನಾ ಬೇಕಲ್ ಉಸ್ತಾದ್ ಉದ್ಘಾಟಿಸುವರು. ಯುನೈಟೆಡ್ ಬ್ರದರ್ಸ್ ಅಧ್ಯಕ್ಷ ಹನೀಫ್ ಚಂದಹಿತ್ಲು ಅಧ್ಯಕ್ಷತೆ ವಹಿಸುವರು. ಮರಿಕ್ಕಳ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ ಹುಬ್ಬುರ್ರಸೂಲ್ ಭಾಷಣ ಮಾಡುವರು ಎಂದು ಪ್ರಕಟನೆ ತಿಳಿಸಿದೆ.
Next Story





