ಪೊಲೀಸರ ಮದ್ಯಪಾನ ತಡೆಯಲು ಕ್ರಮ: ಕೇರಳ ಡಿಜಿಪಿ
.jpg)
ತಿರುವನಂತಪುರಂ,ಡಿ.24: ಪೊಲೀಸರಲ್ಲಿ ಮದ್ಯಸೇವನೆ ವ್ಯಾಪಕವಾಗಿದ್ದು, ಇದನ್ನು ತಡೆಯಲು ಕಠಿಣ ಕ್ರಮತೆಗೆದುಕೊಳ್ಳಲಾಗುವುದೆಂದು ಕೇರಳ ಡಿಜಿಪಿ ಲೋಕ್‌ನಾಥ್ ಬೆಹ್ರ ಹೇಳಿದ್ದಾರೆ.
ಪೊಲೀಸರ ಜೀವನ ಶೈಲಿ ಅವರನ್ನು ಕಾಡುವ ದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಕೆಲಸದ ಒತ್ತಡವೂ ಕಾರಣವಾಗಿದೆ. ಹೆಚ್ಚು ಮದ್ಯಪಾನದಿಂದ ಅವರ ಆರೋಗ್ಯ ಕೆಡುತ್ತಿದೆ , ಅದರಿಂದಾಗಿ ಕರ್ತವ್ಯ ನಿರ್ವಹಣೆಯಲ್ಲಿ ಕೆಟ್ಟ ಪ್ರಭಾವಾಆಗುತ್ತಿದೆ ಎಂದು ಬೆಹ್ರ ಅಭಿಪ್ರಾಯಪಟ್ಟಿದ್ದಾರೆ.
ಸಿಟಿಕಂಟ್ರೋಲ್ ರೂಮ್‌ನಲ್ಲಿ ನಡೆದ ಪೊಲೀಸರ ರಾಜ್ಯಮಟ್ಟದ ಕಣ್ಣುಪರೀಕ್ಷೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತಾಡುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯನ್ನು ಆರೋಗ್ಯಯುತಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಮಾಜಿ ಪೊಲೀಸ್ ಮುಖ್ಯಸ್ಥ ಜೇಕಬ್ ಪುನ್ನೂಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಟಿ ಪೊಲೀಸ್ ಕಮಿಷನರ್ ಜಿ.ಸ್ಪರ್ಜನ್ ಕುಮಾರ್ ಸ್ವಾಗತಿಸಿದರು. ಫಯರ್ ಆಂಡ್ ರೆಸ್ಕ್ಯೂ ಸರ್ವೀಸ್ ಪಿ.ಹೇಮಚಂದ್ರನ್, ಪತ್ರಕರ್ತ ಮಾರ್ಕೊಸ್ ಅಬ್ರಾಹಾಂ, ಸ್ವಸ್ತಿ ಫೌಂಡೇಶನ್‌ಪ್ರಧಾನ ಕಾರ್ಯದರ್ಶಿ ಅಭಯ್ ಜಾರ್ಜ್, ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಒಫಾಲ್ಮೊಲಜಿ ನಿರ್ದೇಶಕ ಡಾ. ಸಹಸ್ರನಾಥಂ, ಡಾ. ದೆವಿನ್ ಪ್ರಭಾಕರ್, ಕಂಟ್ರೋಲ್ ರೂಂ, ಅಸಿಸ್ಟೆಂಟ್ ಕಮಿಶನರ್ ವಿ.ಸುರೇಶ್ ಕುಮಾರ್ ಮಾತಾಡಿದರು.
ಸ್ವಸ್ತಿ ಫೌಂಡೇಶನ್ ಸಹಕಾರದೊಂದಿಗೆ ಯೋಜನೆ ಜಾರಿಗೊಳಿಸುತ್ತಿದ್ದು, ಕೇರಳದ ಇತರ ಜಿಲ್ಲೆಗಳಲ್ಲಿ ವೈದ್ಯಾಧಿಕಾರಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರ ಆರೋಗ್ಯಸ್ಥಿತಿಯನ್ನು ಖಚಿತ ಪಡಿಸುವ ಯೋಜನೆ ಇದು ಎಂದು ವರದಿಯಾಗಿದೆ.





