ದಂಗಲ್ ನ ಗೀತಾ ಫೋಗಟ್ 20 ವರ್ಷದ ಹಿಂದೆಯೇ ಭಾರೀ ಜನಪ್ರಿಯತೆ ಪಡೆದಿದ್ದರು !
ಆ ಫಿಲ್ಮ್ ಯಾವುದೆಂದು ಊಹಿಸಬಲ್ಲಿರಾ ?

ಮುಂಬೈ,ಡಿ.24 : ಆಮಿರ್ ಖಾನ್ ಅವರ ದಂಗಲ್ ಚಿತ್ರದಲ್ಲಿ ಗೀತಾ ಫೋಗಟ್ ಪಾತ್ರಧಾರಿಯಾಗಿ ತನ್ನ ಅಭಿನಯ ಚಾತುರ್ಯತೆಯಿಂದ ಭಾರೀ ಗಮನ ಸೆಳೆದಿರುವ ಫಾತಿಮಾ ಸನಾ ಶೇಖ್ ಅವರು 20 ವರ್ಷಗಳ ಹಿಂದೆಯೂ ಬಹಳಷ್ಟು ಜನಪ್ರಿಯೆ ಪಡೆದಿದ್ದರು.
ಆಗ ಅವರು ಕಮಲ್ ಹಾಸನ್ ಅಭಿನಯದ ಚಾಚಿ 420 ಚಿತ್ರದಲ್ಲಿಬಾಲ ನಟಿ ಭಾರತಿಯಾಗಿ ಮಿಂಚಿದ್ದರು. ಇದೀಗ 20 ವರ್ಷಗಳ ನಂತರ ಅಷ್ಟೇ ಅತ್ಯುತ್ಸಾಹದಿಂದ ದಂಗಲ್ ಚಿತ್ರದಲ್ಲಿ ಕುಸ್ತಿ ಪಟುವಾಗಿ ಮಿಂಚಿದ್ದಾರೆ.
ಕರಣ್ ಜೋಹರ್ ಅವರ ಕಾಫಿ ವಿದ್ ಕರಣ್ ಸೀಸನ್ 5ರಲ್ಲಿ ಆಮಿರ್ ಖಾನ್ ಜತೆ ಕಾಣಿಸಿಕೊಂಡಿದ್ದಸಾನಾ ತಾನು ದಂಗಲ್ ಗೆ ಆಯ್ಕೆಯಾಗುವ ಮುಂಚಿನ ಮೂರು ವರ್ಷಗಳಲ್ಲಿ ಕೈಯ್ಯಲ್ಲಿ ಯಾವುದೇ ಕೆಲಸವಿಲ್ಲದೇ ಇದ್ದೆನೆಂಬುದಾಗಿ ತಿಳಿಸಿದ್ದರು. ‘‘ನನಗೆ ಯಾವುದೇ ಪಾತ್ರಗಳು ಸಿಗುತ್ತಿರಲಿಲ್ಲ, ಜಾಹಿರಾತುಗಳು ಕೂಡ’’ ಎಂದು ಆಕೆ ಹೇಳಿದಾಗ ಆಮಿರ್ ಗೆ ಕೂಡ ಆಶ್ಚರ್ಯವಾಗಿತ್ತು.
1997ರಲ್ಲಿ ತೆರೆ ಕಂಡ ಚಾಚಿ 420 ಹೊರತಾಗಿ,ಸನಾ ಅವರು ಒನ್ 2 ಕಾ 4, ಬಿಟ್ಟೂ ಬಾಸ್ ಚಿತ್ರ ಸೇರಿದಂತೆ ಐದು ಚಿತ್ರಗಳಲ್ಲಿ ನಟಿಸಿದ್ದರೂ ಈ ಎರಡು ಚಿತ್ರಗಳಲ್ಲಿ ಆಕೆಗೆ ಗಮನಾರ್ಹ ಪಾತ್ರಗಳಿದ್ದವು.
ಆಕೆ ದಂಗಲ್ ಗಿಂತ ಮುಂಚೆ ಕೊನೆಯದಾಗಿ ಕಾಣಿಸಿಕೊಂಡಿದ್ದ ಚಿತ್ರ 2013ರಲ್ಲಿ ತೆರೆಕಂಡ ಆಕಾಶ್ ವಾಣಿಯಾಗಿತ್ತು. ಟಿವಿ ಧಾರಾವಾಹಿ ಅಗ್ಲೆ ಜನಮ್ ಮೋಹೆ ಬಿತಿಯಾ ಹಿ ಕಿಜೊ ಇದರಲ್ಲಿ ಆಕೆ ಸುಮನ್ ಪಾತ್ರಧಾರಿಯಾಗಿದ್ದರು.







