ಕೇರಳ ಕಾಂಗ್ರೆಸ್‌ನಲ್ಲಿ ಸೇನಾಧಿಪತಿಗಳಿದ್ದಾರೆ, ಸೈನಿಕರಿಲ್ಲ: ಎಕೆ ಆ್ಯಂಟನಿ

ತಿರುವನಂತಪುರಂ,ಡಿ.24: ಹಿರಿಯ ಕಾಂಗ್ರೆಸ್ ನಾಯಕ ಎಕೆ ಆ್ಯಂಟನಿ ಕೇರಳದ ಕಾಂಗ್ರೆಸ್ ನಾಯಕರನ್ನು ಪರೋಕ್ಷವಾಗಿ ಟೀಕಿಸಿದ್ದು, ಪಕ್ಷದಲ್ಲಿ ಅಗತ್ಯದಷ್ಟು ಜನರಲ್‌ಗಳು, ಸೇನಾಧಿಪತಿಗಳು ಇದ್ದಾರೆ.ಆದರೆ ಕಾಲಾಳುಗಳ ಬಹುದೊಡ್ಡ ಕೊರತೆ ಇದೆ ಎಂದಿದ್ದಾರೆ. ಕೆಳಮಟ್ಟದಿಂದ ಪಕ್ಷವನ್ನು ಬಲಪಡಿಸಬೇಕಾಗಿದೆ. ಅಲ್ಲಿಂದ ಹೆಚ್ಚು ಜನರನ್ನು ಪಕ್ಷದ ಮುಂಚೂಣಿಗೆ ತರಬೇಕು ಎಂದು ಅವರು ಪಕ್ಷ ನಾಯಕರಿಗೆ ಕಿವಿಮಾತುಹೇಳಿದ್ದಾರೆ. 1967ಕ್ಕಿಂತ ದೊಡ್ಡ ಸಮಸ್ಯೆ ಕಾಂಗ್ರೆಸ್ ಈಗ ಎದುರಿಸುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ನಾಯಕತ್ವಕ್ಕೆ ಪ್ರಧಾನವಾದುದು ಕ್ಷಮಿಸುವ ಗುಣವಾಗಿದೆ ಎಂದು ಎಕೆ ಆ್ಯಂಟನಿ ನೆನಪಿಸಿದರು. ತಾನು ಮತ್ತು ಕರುಣಾಕರನ್ ಬಹಳಷ್ಟು ಹೊಂದಾಣಿಕೆ ಮಾಡಿಕೊಂಡಿದ್ದೆವು. ಈಗ ಕೆಪಿಸಿ ಅಧ್ಯಕ್ಷ ವಿ.ಎಂ. ಸುಧೀರನ್, ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹಾಗೂ ಕೆಪಿಸಿಸಿ ಅಧ್ಯಕ್ಷ ವಿ.ಎಂ. ಸುಧೀರನ್ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಂಡು ಒಟ್ಟಾಗಿ ಮುಂದುವರಿಯಬೇಕು. ಡಿಸಿಸಿ ಪುನರ್ರಚನೆ ಕುರಿತು ರಾಜ್ಯ ನಾಯಕರಲ್ಲಿ ಭಿನ್ನಾಭಿಪ್ರಾಯ ಹೊಗೆಯಾಡುತ್ತಿರುವ ವೇಳೆ ಹಿರಿಯ ನಾಯಕ ಆ್ಯಂಟನಿ ಅಭಿಪ್ರಾಯ ಹೆಚ್ಚು ಗಮನಾರ್ಹ ಎಂದು ವರದಿ ತಿಳಿಸಿದೆ.







