ಡಿ.25ರಂದು ಮೆಹಫಿಲೇ ಮೀಲಾದ್ ಕಾರ್ಯಕ್ರಮ
ಬಂಟ್ವಾಳ, ಡಿ.24: ಮಾಣಿಯ ಸುನ್ನೀ ಕೋ ಆರ್ಡಿನೇಶನ್ ಸಮಿತಿಯ ವತಿಯಿಂದ ಡಿ.25ರಂದು ಮಗ್ರಿಬ್ ನಮಾಝ್ ಬಳಿಕ ಸೂರಿಕುಮೇರು ಪೆಟ್ರೋಲ್ ಬಂಕ್ ಬಳಿಯ ಮೈದಾನದಲ್ಲಿ ಮೆಹಫಿಲೇ ಮೀಲಾದ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದ ನೇತೃತ್ವವನ್ನು ಬರೇಲ್ವಿ ಶರೀಫ್ ಉತ್ತರ ಪ್ರದೇಶದ ಹಝ್ರತ್ ಅಲ್ಲಾಮ ಮೌಲಾನಾ ಅರ್ಸಲಾನ್ ರಝಾಖಾನ್ ವಹಿಸುವರು. ಮಾಣಿ ಉಸ್ತಾದ್ ಅಧ್ಯಕ್ಷತೆ ವಹಿಸುವರು. ಯೂಸುಫ್ ರಝಾ ಅಮ್ಜದಿ ದಾವಣಗೆರೆ ಹಾಗೂ ಹುಸೈನ್ ಮುಈನೀ ಅಲ್ ಅಹ್ಸನಿ ಮುಖ್ಯಭಾಷಣಗೈಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





