ಭಟ್ಕಳ: ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಸಾಹಿತ್ಯ ಸ್ಪರ್ಧೆ

ಭಟ್ಕಳ , ಡಿ.24 : ಅಂಜುಮನ್ ಹಾಮಿಯ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಶನಿವಾರ ವಾರ್ಷಿಕ ಸಾಹಿತ್ಯಿಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜಾಮೀಯಾ ಮಸೀದಿ (ಚಿನ್ನದಪಳ್ಳಿ)ಯ ಖತೀಬ್ ಮೌಲಾನ್ ಅಬ್ದುಲ್ ಅಲೀಮ್, ಶ್ರಮವು ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಲ್ಲುದು. ನಾವು ಆಲಸಿಗಳಾಗಿ ಜೀವಿಸಿದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಿಮ್ಮ ಶ್ರಮವೇ ನಿಮ್ಮ ಸಮುದಾಯವನ್ನು ಸಮಾಜದಲ್ಲಿಇ ತಲೆಎತ್ತಿ ತಿರುಗುವಂತೆ ಮಾಡುವಂತೆ, ಸಮುದಾಯದ ಅಭಿವೃದ್ಧಿಗಾಗಿ ಜೀವನದಲ್ಲಿ ಮುಂದೇ ಬರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಸೈಯ್ಯದ್ ಅಬ್ದುಲ್ ರಹ್ಮಾನ್ ಬಾತಿನ್, ಶಿಕ್ಷಕರು ನಮಗಾಗಿ ಬಹಳಷ್ಟು ಶ್ರಮವಹಿಸಿದ್ದರು. ಆ ಕಾರಣದಿಂದಲೇ ನಾವು ಸಾಹಿತ್ಯಿಕವಾಗಿ ಇಷ್ಟೊಂದು ಮುಂದೆ ಬಂದಿರುವುದು. ಈಗ ನಿಮ್ಮ ಶಿಕ್ಷಕರು ನಿಮ್ಮ ಮೇಲೆ ಇಷ್ಟೊಂದು ಶ್ರಮ ವಹಿಸುತ್ತಿರುವುದು ನೀವು ಕೂಡ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಲಿ ಎಂದು ಎಂದರು.
ವೇದಿಕೆಯಲ್ಲಿ ಹೈಸ್ಕೂಲ್ ಬೋರ್ಡ್ ಕಾರ್ಯದರ್ಶಿ ಅಬ್ದುಲ್ ವಾಜೀದ್ ಕೋಲಾ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಶಬ್ಬಿರ್ ಆಹ್ಮದ್ ದಫೆದಾರ್ ಸ್ವಾಗತಿಸಿದರು.
ಮೌಲಾನ ಶಾಹೀನ್ ಖಮರ್ ಪರಿಚಯಿಸಿದರು.
ಶಿಕ್ಷಕರಾದ ಅಬ್ದುಲ್ ರಷೀದ್ ಮಿರ್ಜಾನಿ ಹಾಗೂ ಮೌಲಾನ ಅಬ್ದುಲ್ ಹಫೀರ್ ಖಾನ್ ಕಾರ್ಯಕ್ರಮ ನಿರೂಪಿಸಿದರು.
ಮೌಲಾನ ಮುಹಮ್ಮದ್ ಅಶ್ರಫ್ ಮುಅಲ್ಲಿಮ್ ಧನ್ಯವಾದ ಅರ್ಪಿಸಿದರು.







