ದೇರಳಕಟ್ಟೆ: ಕಣಚೂರು ಶಾಲಾ ವಾರ್ಷಿಕೋತ್ಸವ

ಕೊಣಾಜೆ , ಡಿ.24 : ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಉನ್ನತ ಪದವಿಗಳಿಗಿಂತ ಜೀವನದ ಮೌಲ್ಯಗಳು ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಪ್ರಮುಖವಾದದು ಎಂದು ಡಾ ಎಮ್. ರಮಣ ಶೆಟ್ಟಿ ಮೆಮೋರಿಯಲ್ ಇಂಗ್ಲೀಷ್ ಮಾಧ್ಯಮ ಪ್ರೌಢ ಶಾಲೆಯ ಪ್ರಾಂಶುಪಾಲರಾದ ಶ್ರೀಲತಾ ರಾವ್‌ರವರು ಹೇಳಿದರು.
ದೇರಳಕಟ್ಟೆಕಣಚೂರು ಶಾಲಾ ಪೂರ್ವಪ್ರಾಥಮಿಕ ವಿಭಾಗ ಹಾಗೂ ಪ್ರೌಢ ಶಾಲಾ ವಿಭಾಗದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಸಂಚಾಲಕರಾದ ಯು.ಕೆ. ಮೋನುರವರು ಮಾತನಾಡಿ, ಶಾಲೆಯ ಎಲ್ಲಾ ಚಟುವಟಿಕೆಗಳಿಗೆ ತಮ್ಮ ಸಂಪೂರ್ಣ ಸಹಕಾರ ಹಾಗೂ ಬೆಂಬಲವಿದೆ ಎಂದು ತಿಳಿಸಿದರು.
ಈ ಸಂದರ್ದಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಣಚೂರು ವಿದ್ಯಾಸಂಸ್ಥೆಯ ಟ್ರಸ್ಟಿಗಳಾದ ಜೊಹರಾ ಮೋನು, ಶಹದಾ ರೆಹಮಾನ್‌ರವರು ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲರಾದ ರಾಮಚಂದ್ರ ಭಟ್‌ರವರು ಸ್ವಾಗತಿಸಿದರು. ಆನಂದಿಯವರು ಶಾಲಾ ವರದಿಯನ್ನು ವಾಚಿಸಿದರು. ಲಿನೆಟ್ ಡಿಸೋಜ ವಂದಿಸಿದರು.
ವೇದಿಕೆಯಲ್ಲಿ ಕಣಚೂರು ವಿದ್ಯಾಸಂಸ್ಥೆಯ ವಿವಿಧ ವಿಭಾಗದ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಬಳಿಕ ಸಾಂಸ್ಕೃತಿಕ ಕಾಯರ್ಕ್ರಮ ನಡೆಯಿತು.







