ಕೇರಳ ಮುಖ್ಯಮಂತ್ರಿಗೆ ಕೊಲೆ ಬೆದರಿಕೆ

ತಿರುವನಂತಪುರಂ,ಡಿ. 24: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಫೇಸ್‌ಬುಕ್ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಕೇರಳ ಡಿಜಿಪಿ ಲೋಕನಾಥ್ ಬೆಹ್ರ ಕ್ರೈಂಬ್ರಾಂಚ್ ತನಿಖೆಗೆ ಆದೇಶನೀಡಿದ್ದಾರೆ. ಯುಎಇ ಯಿಂದ ಫೇಸ್‌ಬುಕ್ ಪೋಸ್ಟ್ ಹಾಕಲಾಗಿದ್ದು, ಇದನ್ನು ವಿರೋಧಿಸಿ ಪ್ರತಿಕ್ರಿಯೆ ನೀಡಿದ್ದರಿಂದ ಫೇಸ್‌ಬುಕ್ ಪೋಸ್ಟನ್ನು ಹಿಂಪಡೆಯಲಾಗಿದೆ.
ಅಜಿತ್ ಎಂಬವರು ದೂರು ನೀಡಿದ್ದು, ಪೋಸ್ಟ್ ಹಾಕಿದ್ದ ವ್ಯಕ್ತಿಯ ವಿವರವನ್ನು ಪೊಲೀಸರಿಗೆ ನೀಡಿದ್ದಾರೆ. ಸೈಬರ್ ಪೊಲೀಸ್ ತನಿಖೆ ಆರಂಭಿಸಿದೆ. ಘಟನೆಯನ್ನು ಅತ್ಯಂತ ಗಂಭೀರವಾಗಿ ಪೊಲೀಸ್ ಇಲಾಖೆ ಪರಿಗಣಿಸಿದೆ ಎಂದು ವರದಿ ತಿಳಿಸಿದೆ.
Next Story





