ಮುಝಫರ್‌ನಗರ: 1,12,746 ಹೊಸ ಮತದಾರರು

ಮುಝಫರ್‌ನಗರ,ಡಿ.24: ಹೊಸವರ್ಷದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 1,12,746 ನೂತನ ಮತದಾರರ ಸೇರ್ಪಡೆಯೊಂದಿಗೆ ಜಿಲ್ಲೆಯಲ್ಲಿ 8,72,039 ಮಹಿಳೆಯರು ಮತ್ತು 163 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 19,12,228 ಜನರು ಮತದಾನ ಮಾಡಲಿದ್ದಾರೆ ಎಂದು ಮುಝಫರ್‌ನಗರ ಜಿಲ್ಲಾಧಿಕಾರಿ ಡಿ.ಕೆ.ಸಿಂಗ್ ಅವರು ಇಂದಿಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.
ಜಿಲ್ಲೆಯು ಮುಝಫರ್‌ನಗರ,ಬುಧಾನಾ,ಪುರ್ಕಾಝಿ,ಖಟೋಲಿ,ಚರ್ತ್‌ವಾಲ್ ಮತ್ತು ಮಿರಾನ್‌ಪುರ ಸೇರಿದಂತೆ ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.
Next Story





