ಯುವಕ ನಾಪತ್ತೆ

ಉಡುಪಿ, ಡಿ.24: ತಾಲೂಕಿನ ಆತ್ರಾಡಿ ಗ್ರಾಮದ ಎನ್.ಬಾಲಕೃಷ್ಣ ಪೂಜಾರಿ ಎಂಬವರ ಪುತ್ರ ಶರತ್‌ಕುಮಾರ್(36) ಎಂಬವರು ಡಿ.10ರಂದು ಬೆಳಗ್ಗೆ 10 ಗಂಟೆಗೆ ಮನೆಯಿಂದ ಹೊರಗೆ ಹೋದವರು ಈವರೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಕಾಣೆಯಾದ ವ್ಯಕ್ತಿ 5.7 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ದೃಢಕಾಯ ಶರೀರ, ದುಂಡು ಮುಖ, ಮೂಗಿನ ಮೇಲೆ ಹಳೆಯ ಗಾಯದ ಗುರುತು ಇದ್ದು, ಕನ್ನಡ, ಇಂಗ್ಲೀಷ್, ಹಿಂದಿ, ತುಳು, ಮಲೆಯಾಳಂ, ತೆಲುಗು ಭಾಷೆ ಬಲ್ಲವರಾಗಿದ್ದಾರೆ. ಇವರ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂರವಾಣಿ ಸಂಖ್ಯೆ:0820-2534777, 2526444 ಅಥವಾ ಬ್ರಹ್ಮಾವರ ವೃತ್ತ ಕಚೇರಿ ದೂರವಾಣಿ ಸಂಖ್ಯೆ:0820-2561966 ಅಥವಾ ಹಿರಿಯಡಕ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:0820-2542248ನ್ನು ಸಂಪಕಿರ್ ಸುವಂತೆ ಪ್ರಕಟಣೆ ತಿಳಿಸಿದೆ.
Next Story





