ಸುನ್ನೀ ಸಂದೇಶ ವಿಶೇಷ ಸಂಚಿಕೆ ಬಿಡುಗಡೆ

ಮಂಗಳೂರು, ಡಿ. 24: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಪ್ರಕಾಶಿತ ಸುನ್ನೀ ಸಂದೇಶ ಮಾಸಿಕ ಇದರ ಜಂಇಯ್ಯತುತ್ತರ್ಬಿಯತ್ತಲ್ ಬುಖಾರಿಯ್ಯಃ ಹಾಮಿದಾಬಾದ್ ದುಗ್ಗಲಡ್ಕ ಮಖಾಂ ಕಟ್ಟಡ ಉದ್ಘಾಟನೆಯ ವಿಶೇಷ ಸುನ್ನೀ ಸಂದೇಶ ಸಂಚಿಕೆಯನ್ನು ಅಂತರ್‌ರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಅವರು ಆರೋಗ್ಯ ಸಚಿವ ಯು.ಟಿ. ಖಾದರ್‌ರವರಿಗೆ ನೀಡುವ ಮೂಲಕ ಇಂದು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸಾದಿಕ್ ಅಲಿ ಶಿಹಾಬ್ ತಂಙಳ್, ಝೈನುಲ್ ಅಬಿದೀನ್ ತಂಙಳ್, ಹಾಮಿದ್ ಕೋಯಮ್ಮ ತಂಙಳ, ಫಝಲ್ ತಂಙಳ್, ಮುನೀರ್ ದಾರಿಮಿ ಗೂನಡ್ಕ, ರಫೀಕ್ ಅಜ್ಜಾವರ, ಜಲೀಲ್ ಅಲ್‌ರಮಿ ಅಜ್ಜಾವರ, ಇಸ್ಮಾಯೀಲ್ ಬೆಂಗರೆ, ಮುಸ್ತಫಾ ಫೈಝಿ ಮೊದಲಾದವರು ಉಪಸ್ಥಿತರಿದ್ದರು.
Next Story





